ಕರಾವಳಿ

ಬೆಲ್ಲದಲ್ಲಿದೆ ಸಕ್ಕರೆಗಿಂತಲೂ ವಿಶಿಷ್ಟವಾದ ಆರೋಗ್ಯಕರ ಗುಣ

Pinterest LinkedIn Tumblr

ಬೆಲ್ಲವನ್ನು ಸಕ್ಕರೆಗೆ ಪರ್ಯಾಯವಾಗಿ ದಕ್ಷಿಣ ಏಷ್ಯಾದ ಬಹಳಷ್ಟು ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಆದರೆ ಬೆಲ್ಲಕ್ಕೆ ಇರುವ ಅನೇಕ ಆರೋಗ್ಯಕಾರಿ ಉಪಯೋಗಗಳ ಕಾರಣ ಇದು ಯಾವ ರೀತಿಯ ಸಕ್ಕರೆಗಿಂತಲೂ ವಿಶಿಷ್ಟವಾದದ್ದು. ಈ ದಿನ ನಾವು ನಿಮಗೆ ಬೆಲ್ಲದ ಇಂತಹ ಅನೇಕ ಉಪಯೋಗಗಳ ಪಟ್ಟಿ ಇಲ್ಲಿದೆ.

೧. ದೇಹವನ್ನು ಶುಚಿಗೊಳಿಸುತ್ತದೆ
ಸಂಶೋಧಕರು ಬೆಲ್ಲವು ಹೇಗೆ ದೇಹವನ್ನು ಶುಚಿಗೊಳಿಸುತ್ತದೆ ಎಂಬುದನ್ನು ಪುರಾವೆಗಳ ಮೂಲಕ ಸಾಬೀತು ಮಾಡಿದ್ದಾರೆ. ಇದು ನಿಮ್ಮ ಉಸಿರಾಟಾದ ಕೊಳವೆಯನ್ನು, ಶ್ವಾಸಕೋಶವನ್ನು, ಕರುಳುಗಳನ್ನು, ಹೊಟ್ಟೆಯನ್ನೂ ಕೂಡ ಶುಚಿಗೊಳಿಸುತ್ತದೆ. ಇದು ನಿಮ್ಮ ದೇಹದಲ್ಲಿನ ಬೇಡದ ವಸ್ತುಗಳೊಂದಿಗೆ ಧೂಳನ್ನು ಹೊರಹಾಕುತ್ತದೆ. ಅಲ್ಲದೆ ಇದು ಕರುಳಿನ ಚಲನೆಯನ್ನು ವೃದ್ಧಿಸಿ, ಹೊಟ್ಟೆ ಕಟ್ಟಿಕೊಳ್ಳದಂತೆ ಕಾಪಾಡುತ್ತದೆ.

೨. ಮುಟ್ಟಿನ ನೋವಿನಿಂದ ಶಮನ
ಅತಿ ಹೆಚ್ಚು ಪೋಷಕಾಂಶಗಳ ಪ್ರಮಾಣ ಹೊಂದಿರುವ ಬೆಲ್ಲವು ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವುದರಲ್ಲಿ ಬಹಳ ಉಪಕಾರಿ. ಮುಖ್ಯವಾಗಿ, ವಿಜ್ಞಾನಿಗಳು ಬೆಲ್ಲವು ಉಳುಕುಗಳಿಂದ ಮುಕ್ತಿ ನೀಡುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ನೀವು ಋತುಸ್ರಾವದ ವೇಳೆ ಮಾನಸಿಕವಾಗಿ ಏರುಪೇರು ಕಂಡಲ್ಲಿ, ಸ್ವಲ್ಪ ಬೆಲ್ಲವನ್ನು ಸೇವಿಸಿ. ಬೆಲ್ಲವು ಎಂಡೋರಫಿನ್ಸ್ ಬಿಡುಗಡೆಯನ್ನು ವೃದ್ಧಿಸಿ, ನಿಮ್ಮ ದೇಹವು ಶಾಂತವಾಗುವಂತೆ ಮಾಡುತ್ತದೆ. ಇದು ನೀವು ನಿಮ್ಮ ಮಾನಸಿಕ ತುಲನೆಯನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ.

೩. ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ
ಬೆಲ್ಲದಲ್ಲಿರುವ ಪೊಟ್ಯಾಸಿಯಂ ಅಂಶವು ನಿಮಗೆ ತೂಕ ಇಳಿಸುವುದರಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಪೊಟ್ಯಾಸಿಯಂ ನಿಮ್ಮ ದೇಹದಲ್ಲಿ ಅಗತ್ಯವಿರುವ ಎಲೆಕ್ಟ್ರೋಲೈಟ್ಸ್ ತುಲನೆ, ಸ್ನಾಯುಗಳ ಬೆಳವಣಿಗೆ, ಮೆಟಬೋಲಿಸಂ ವೃದ್ಧಿ ಯಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಇದು ನೀರಿನಾಂಶದ ಸ್ವಾಧೀನತೆ ಕಡಿಮೆ ಮಾಡಿ ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ. ನೀರಿನಾಂಶದ ತೊರೆಯುವಿಕೆ ಮತ್ತು ಮೆಟಬೋಲಿಸಂ ವೇಗ ಹೆಚ್ಚಿಸುವಿಕೆಯೇ ತೂಕ ಇಳಿಸುವಿಕೆಯಲ್ಲಿ ಅತಿಮುಖ್ಯವಾಗಿ ಬೇಕಿರುವುದು. ಹೀಗಾಗಿ, ನೀವು ನಿಮ್ಮ ದೈನಂದಿನ ಆಹಾರಪದ್ದತಿಯಲ್ಲಿ ಬೆಲ್ಲವನ್ನು ಬಳಸಬೇಕು. ಅದು ಯಾವುದೇ ರೀತಿಯಲ್ಲಿ ಆದರೂ ಪರವಾಗಿಲ್ಲ.

೪. ರಕ್ತಹೀನತೆಯನ್ನು ತಡೆಗಟ್ಟುತ್ತದೆ
ರಕ್ತಹೀನತೆ ಅಥವಾ ಅನೀಮಿಯಾ ಈಗೀಗ ಬಹಳಷ್ಟು ಕಂಡು ಬರುತ್ತಿರುವ ಒಂದು ಅಸ್ವಸ್ಥತೆ. ಆದರೆ ಅದೃಷ್ಟವಶಾತ್, ಬೆಲ್ಲದಲ್ಲಿ ಇರುವ ಅಪಾರ ಪ್ರಮಾಣದ ಕಬ್ಬಿಣದ ಅಂಶ ಮತ್ತು ಫೋಲೇಟ್ ಅಂಶವು ಇದ್ದು, ಇವುಗಳು ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಸರಿಯಾದ ಪ್ರಮಾಣದಲ್ಲಿ ಇರಿಸಿ ನೀವು ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸುತ್ತವೆ. ಮುಖ್ಯವಾಗಿ ಗರ್ಭಿಣಿ ಹೆಂಗಸರು ಇದರ ಸದುಪಯೋಗ ಮಾಡಿಕೊಳ್ಳಬೇಕು.

೫. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಬೆಲ್ಲದ ಇನ್ನೊಂದು ಉಪಯೋಗ ಎಂದರೆ ಅದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಬೆಲ್ಲದಲ್ಲಿ ಅಪಾರ ಪ್ರಮಾಣದ ಪೊಟ್ಯಾಸಿಯಂ ಮತ್ತು ಸೋಡಿಯಂ ಇದ್ದು, ಇವು ನಿಮ್ಮ ದೇಹದಲ್ಲಿ ಆಮ್ಲಗಳ ಗತಿಯನ್ನು ತುಲನೆಯಲ್ಲಿ ಇಡಲು ತುಂಬಾ ಸಹಾಯ ಮಾಡುವಂತವು. ಈ ತುಲನೆ ಕಾಪಾಡಿಕೊಂಡರೆ ದೇಹದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ.

೬. ಕೀಲು (ಮಂಡಿ, ಇಮ್ಮಡಿ, ಇತ್ಯಾದಿ) ನೋವುಗಳನ್ನು ಕಡಿಮೆ ಮಾಡುತ್ತದೆ
ಕೀಲುನೋವುಗಾಲ ಶಮನವು ಬೆಲ್ಲದ ಒಂದು ಮುಖ್ಯ ಉಪಯೋಗವಾಗಿದ್ದು ನೀವು ಇದನ್ನು ಮಿಸ್ ಮಾಡುವಂತೆಯೇ ಇಲ್ಲ. ನಿಮಗೆ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ನೀವು ಒಂದು ಚೂರು ಬೆಲ್ಲ ತಿಂದು ನಿಮ್ಮ ನೋವನ್ನು ಶಮನ ಮಾಡಿಕೊಳ್ಳಬಹುದು. ಇದರೊಂದಿಗೆ ನೀವು ಬೆಲ್ಲವನ್ನು ಸಣ್ಣ ಶುಂಠಿಯ ತುಂಡೊಂದಿಗೆ ಅಗಿದು ತಿಂದು ನೋವು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಮೂಳೆಗಳು ಗಟ್ಟಿ ಆಗುವುದಕ್ಕೆ ನೀವು ದಿನನಿತ್ಯ ಒಂದು ಲೋಟ ಹಾಲಿಗೆ ಸ್ವಲ್ಪ ಬೆಲ್ಲ ಬೆರೆಸಿ ಸೇವಿಸಬೇಕು.

೭. ತಾರುಣ್ಯ ಕಾಪಾಡುತ್ತದೆ
ಬೆಲ್ಲದಿಂದ ಇಷ್ಟೆಲ್ಲಾ ಆರೋಗ್ಯಕರ ಉಪಯೋಗಗಳು ಸಾಧ್ಯ ಆಗುವುದಕ್ಕೆ ಒಂದು ಕಾರಣ ಎಂದರೆ ಅದರಲ್ಲಿರುವ ಅಪಾರ ಪ್ರಮಾಣದ ಉತ್ಕರ್ಷಣ ನಿರೋಧಕಗಳು (ಆಂಟಿ-ಆಕ್ಸಿಡಾಂಟ್ಸ್). ಮುಖ್ಯವಾಗಿ ಬೆಲ್ಲದಲ್ಲಿರುವ ಸೆಲೇನಿಯಂ ಮುಕ್ತ ರಾಡಿಕಲ್ಸ್ ಗಳ ಅಪಾಯಕಾರಿ ಪರಿಣಾಮಗಳನ್ನು ನಿಲ್ಲಿಸುತ್ತದೆ. ಸಾಮಾನ್ಯವಾಗಿ ಹೇಳಬೇಕೆಂದರೆ , ಇದು ನಿಮ್ಮ ದೇಹದ ಆಯಸ್ಸು ಹೆಚ್ಚಿಸಿ ಮತ್ತು ನೀವು ತಾರುಣ್ಯತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Comments are closed.