ಕರಾವಳಿ

ಹಾಲಾಡಿ ವಿರುದ್ಧ ಮಾತನಾಡಿದ್ರೇ ಪಕ್ಷದಿಂದ ಶಿಸ್ತು ಕ್ರಮ: ಬಿ.ಎಸ್ ಯಡಿಯೂರಪ್ಪ

Pinterest LinkedIn Tumblr

ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯ ಕೆಲವು ತಪ್ಪು ನಿರ್ಧಾರಗಳಿಂದ ಪಕ್ಷ ಬಿಟ್ಟು ಹೋಗುವಂತಾಗಿತ್ತು. ಒಂದು ತಿಂಗಳ ಒಳಗಾಗಿ ಅವರು ಮತ್ತೆ ಬಿಜೆಪಿ ಸೇರಿಕೊಳ್ಳಲಿದ್ದಾರೆ. ಬಿಜೆಪಿಗೆ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂಥವರ ವಿರುದ್ಧ ಪಕ್ಷವೇ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದರು.

ಸೋಮವಾರ ಮಣಿಪಾಲದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಾಲಾಡಿ ಶ್ರೀನಿವಾಸ ಶೆಟ್ಟಿ ಸರಳ ಸಜ್ಜನಿಕೆಯ ಪ್ರಭಾವಿ ರಾಜಕಾರಣಿ. ಬಿಜೆಪಿಯ ತಪ್ಪಿನಿಂದಾಗಿ ಅವರು ಪಕ್ಷೇತರನಾಗಿ ಸ್ಪರ್ಧಿಸು ವಂತಾಗಿತ್ತು. ಆದರೆ ಅವರು ಬಿಜೆಪಿಗೆ ಬೆಂಬಲ ನೀಡಿ ದ್ದಾರೆ. ಆಡಳಿತದಲ್ಲಿ ಕ್ಷೇತ್ರದ ಜನತೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಾವೇ ಅವರನ್ನು ಬಿಜೆಪಿಗೆ ಸೇರು ವಂತೆ ಒತ್ತಾಯಿಸಿದ್ದೇವೆ. ಕೆಲವು ತಾಂತ್ರಿಕ ತೊಂದರೆ ಗಳು ನಿವಾರಣೆಯಾದ ಅನಂತರ ಅವರು ಬಿಜೆಪಿ ಸೇರಿ ಕೊಳ್ಳಲಿದ್ದು, ಡಿಸೆಂಬರ್‌ ಬಳಿಕ ಪಕ್ಷದ ಎಲ್ಲ ಚಟು ವಟಿಕೆ ಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Comments are closed.