ಕರಾವಳಿ

ಬಡ್ತಿ ಮಿಸಲಾತಿ ಆದೇಶ ಜಾರಿ, ಶೇಕಡಾ 15 ರಷ್ಟು ಸಂಚಾರಿ ಭತ್ಯೆಗೆ ಒತ್ತಾಯ: ಸಿ.ಎಂ.ಗೆ ಮನವಿ

Pinterest LinkedIn Tumblr

ಉಡುಪಿ: ಬಡ್ತಿ ಮಿಸಲಾತಿ ಆದೇಶ ಶೀಘ್ರವೇ ಜಾರಿಗೊಳಿಸುವಂತೆ ಹಾಗೂ ಸಂಚಾರಿ ಭತ್ಯೆಯನ್ನು ಶೇಕಡಾ 15 ರಷ್ಟು ನೀಡುವಂತೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ವತಿಯಿಂದ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯಾನವರಿಗೆ ಮನವಿ ಸಲ್ಲಿಸಿದ್ದರು.

ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ  ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ,ವಿಕಲಚೇತನ ನೌಕರರಿಗೆ ಅವರ ಸೇವಾಜೇಷ್ಠತೆಯನ್ನು ಅನುಸರಿಸಿ ಶೇಕಡಾ 3 ರಷ್ಟು ಬಡ್ತಿ ಮಿಸಲಾತಿ ನೀಡುವಂತೆ ದೇಶದ ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ ಆದೇಶ ಮಾಡಿ ಎರಡು ವರ್ಷ ಕಳೆದರು ಕೂಡಾ ಬಡ್ತಿ ಮಿಸಲಾತಿ ಆದೇಶ ಜಾರಿಯಾಗಿಲ್ಲ.ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿ ಪ್ರಕ್ರೀಯೆಯು ನಡೆದಿದರಿಂದ ಈ ಒಂದು ಸೌಲಭ್ಯದಿಂದ ವಿಕಲಚೇತನ ನೌಕರರು ವಂಚಿತರಾಗುತ್ತಿದ್ದು,ಬಡ್ತಿ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಆದೇಶ ಶೀಘ್ರವೇ ಜಾರಿಗಳೊಳಿಸಬೇಕು ಹಾಗೂ ವಿಕಲಚೇತನ ನೌಕರರಿಗೆ ಈಗಾಗಲೇ ಅವರ ಮೂಲ ವೇತನದ ಶೇಕಡಾ 6 ರಷ್ಟು ಸಂಚಾರಿ ಭತ್ಯೆಯನ್ನು ನೀಡುತ್ತಿದ್ದು 6ನೇ ವೇತನ ಆಯೋಗಕ್ಕೆ ಸಂಚಾರಿ ಭತ್ಯೆಯನ್ನು ಮೂಲ ವೇತನದ 6 ರಿಂದ ಶೇಕಡಾ 15 ರಷ್ಟು ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ವರದಿ ನೀಡಲಿದ್ದಾರೆ.ವರದಿಯ ಅನ್ವಯ ಸಂಚಾರಿ ಭತ್ಯೆಯನ್ನು ಶೇಕಡಾ 15 ರಷ್ಟು ಹೆಚ್ಚಿಸಬೇಕು,ವಿವಿಧ ಅನುದಾನಗಳಲ್ಲಿ ಶೇಕಡಾ 3 ರಷ್ಟು ವಿಕಲಚೇತನರಿಗೆ ಖರ್ಚು ಮಾಡಬೇಕು ಎಂಬ ಆದೇಶ ಸರಿಯಾದ ರೀತಿಯಲ್ಲಿ ಅನುಷ್ಟಾನ ಮಾಡಬೇಕು,ನೇಮಕಾತಿಯಲ್ಲಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರು.

ಈ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ,ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳ್ಳಿ ಮುಂತಾದವರು ಹಾಜರಿದ್ದರು.

 

 

 

 

 

 

Comments are closed.