ಕರ್ನಾಟಕ

ಐಸ್‌ಕ್ಯೂಬ್ಸ್‌ನಲ್ಲಿ ಅಪಾಯಕಾರಿ ’ಇ.ಕೋಲಿ’ ಬ್ಯಾಕ್ಟೀರಿಯಾ ಪತ್ತೆ.

Pinterest LinkedIn Tumblr

ಈ ನಡುವೆ ಹೊರೆಗೆ ಏನಾದರೂ ತಿನ್ನೋಣ ಎಂದರೆ ಸಾಕು, ಏನು ಅನಾರೋಗ್ಯ ಉಂಟಾಗುತ್ತದೋ ಏನೋ ಎಂದು ಭಯವಾಗುತ್ತಿರುತ್ತದೆ. ಇದರ ಜತೆಗೆ ಹೊರಗೆ ಕೊಳ್ಳುವ ಯಾವುದೇ ಆಹಾರ ಪದಾರ್ಥದಲ್ಲಾದರೂ ಏನೋ ಒಂದು ರಾಸಾಯನಿಕ ಇದೆಯೆಂದು, ಅವನ್ನು ತಿಂದರೆ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆಂದು ಹಲವು ಸಂಶೋಧನೆಗಳ ಲ್ಯಾಬ್‌ಗಳು ಎಚ್ಚರಿಸುತ್ತಿವೆ. ಹಾಗಾಗಿ ಏನು ತಿನ್ನಬೇಕು, ಏನು ತಿನ್ನಬಾರದು ಗೊತ್ತಾಗದಂತಹ ಅಯೋಮಯ ಪರಿಸ್ಥಿತಿ ಇದೆ. ಮೊನ್ನೆ ಮ್ಯಾಗಿ ನೂಡಲ್ಸ್, ಬಳಿಕ ಬ್ರೆಡ್ ಉತ್ಪನ್ನಗಳು, ಆ ಬಳಿಕ ಅಲ್ಯೂಮಿನಿಯಂ ಫಾಯಿಲ್ಸ್…ಈಗ ತಾಜಾ ಬೆಳವಣಿಗೆಯಲ್ಲಿ ಐಸ್‌ಕ್ಯೂಬ್ಸ್. ಐಸ್ ಕ್ಯೂಬ್ಸ್‌ನಲ್ಲಿ ಒಂದು ವಿಧದ ಹಾನಿಕರ ಬ್ಯಾಕ್ಟರಿಯ ಇದೆಯಂತೆ. ಇದರಿಂದ ಪ್ರಾಣಾಪಾಯ ಇದೆ ಎಂದು ತಾಜಾ ಸಂಶೋಧನೆಯೊಂದು ಹೇಳುತ್ತಿದೆ.

ಮುಂಬೈನಲ್ಲಿನ ಬೃಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನ ಸ್ಥಳೀಯ ಕೆಲವು ಪ್ರದೇಶಗಳಲ್ಲಿನ ಐಸ್ ವರ್ತಕರು, ಶೀತಲ ಪಾನೀಯ ಮಾರಾಟಗಾರರು, ಹೋಟೆಲ್ಸ್, ಬಾರ್ಸ್‌ನಂತಹವುಗಳಿಂದ ಸುಮಾರು 948 ಐಸ್ ಕ್ಯೂಬ್ಸ್ ಸ್ಯಾಂಪಲ್ಸ್ ಸಂಗ್ರಹಿಸಿದರು. ಅವುಗಳನ್ನು ಪರೀಕ್ಷಿಸಲಾಗಿ ಅವುಗಳಲ್ಲಿ 870 ಸ್ಯಾಂಪಲ್ಸ್ ಎಂದರೆ ಶೇ.92ರಷ್ಟು ಐಸ್‌ಕ್ಯೂಬ್ಸ್ ಅಪಾಯಕಾರಿ ’ಇ.ಕೋಲಿ’ ಬ್ಯಾಕ್ಟೀರಿಯಾ ಇರುವುದಾಗಿ ನಿರ್ಧರಿಸಿದ್ದಾರೆ.

ಐಸ್‍ಕ್ಯೂಬ್ಸ್ ತಯಾರಕರು ಗುಣಮಟ್ಟವಿಲ್ಲದ ನೀರನ್ನು ಬಳಸುತ್ತಿರುವುದು, ಸೂಕ್ತ ಸ್ವಚ್ಛತೆಯನ್ನು ಪಾಲಿಸದಿರುವುದರಿಂದ ಮಲದಲ್ಲಿನ ಇ.ಕೋಲಿ ಬ್ಯಾಕ್ಟೀರಿಯಾ ಐಸ್‌ಕ್ಯೂಬ್‌ನಲ್ಲಿ ಸೇರಿದೆ ಎಂದು ಬಿಎಂಸಿ ಹೇಳುತ್ತಿದೆ. ಈ ಕ್ರಮದಲ್ಲಿ ಆ ಐಸ್‌ಕ್ಯೂಬ್ಸ್‌ನ್ನು ತೆಗೆದುಕೊಂಡವರ ದೇಹದಲ್ಲಿ ಆ ಬ್ಯಾಕ್ಟೀರಿಯಾ ಪ್ರವೇಶಿಸುತ್ತದೆ. ಇದರಿಂದ ಗ್ಯಾಸ್, ಡಯೇರಿಯಾ, ವಾಂತಿ, ಬೇಧಿ, ಫುಡ್ ಪಾಯ್ಸನಿಂಗ್ ಇನ್ನಿತರೆ ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುವ ಅವಕಾಶಗಳು ಇವೆ ಎಂದು ಎಚ್ಚರಿಸುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದು ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಅವಕಾಶ ಇದೆ ಎನ್ನುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ನೀವು ಸಹ ಐಸ್‍ಕ್ಯೂಬ್ಸ್, ಐಸನ್ನು ಹೊರಗೆ ತಿನ್ನುವುದನ್ನು ಬಿಡಿ. ಸಾಧ್ಯವಾದಷ್ಟು ಮಟ್ಟಿಗೆ ಅವನ್ನು ಮನೆಯಲ್ಲೇ ತಯಾರಿಸಿಕೊಂಡು ಉಪಯೋಗಿಸಿ. ಯಾಕೆಂದರೆ ಆರೋಗ್ಯ ಮಹಾಭಾಗ್ಯ ಅಲ್ಲವೇ!

Comments are closed.