ಆರೋಗ್ಯ

ಹಸಿರು ಮತ್ತು ನೇರಳೆ ಬಣ್ಣದ ಬದನೆಕಾಯಿಯಲ್ಲಿ ಯಾವುದು ಆರೋಗ್ಯ ಉತ್ತಮ..

Pinterest LinkedIn Tumblr

ತರಕಾರಿಗಳಲ್ಲೇ ರುಚಿಯಾದ ಬದನೆಕಾಯಿ ಅಡುಗೆಗಳಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ಹಸಿರು ಮತ್ತು ನೇರಳೆ ಬಣ್ಣದ ಎರಡು ರೀತಿಯ ಬದನೆ ಸಿಗುತ್ತದೆ. ಇವುಗಳಲ್ಲಿ ಉತ್ತಮವಾದದ್ದು ಯಾವುದು ಎಂದು ತಿಳಿದುಕೊಳ್ಳೋಣ.

ನೇರಳೆ ಬಣ್ಣದ ಬದನೆಕಾಯಿಯೇ ಒಳ್ಳೆಯದೆಂದು ಹೇಳಬಹುದು. ಆಹಾರಪದಾರ್ಥಗಳಲ್ಲಿ ಈ ಬಣ್ಣವನ್ನು ಹೊಂದಿರುವುದು ಬದನೆಕಾಯಿ ಮತ್ತು ನೇರಳೆ ಹಣ್ಣು. ಇವೆರಡೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಸಿರು ಬಣ್ಣಕ್ಕೆ ಹೋಲಿಸಿದರೆ ನೇರಳೆ ಬಣ್ಣದ ಬದನೆ ಬೆಳೆಯುವ ಸಮಯದಲ್ಲಿ ಅಧಿಕವಾದ ಸೂರ್ಯನ ಕಾಂತಿಯನ್ನು ಹೀರಿಕೊಳ್ಳುತ್ತದೆ. ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಬದನೆಕಾಯಿಯ ಪಲ್ಯದೊಂದಿಗೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿಯನ್ನು ಸೇವಿಸಿದರೆ ತುಂಬಾ ಒಳ್ಳೆಯದು.

ಬದನೆಯನ್ನು ಸೇವಿಸುವುದರಿಂದ ತೂಕ ಹಾಗೂ ವಾತ ಹೆಚ್ಚಾಗುವುದೆಂಬ ಕೆಲವು ಮೂಢನಂಬಿಕೆಗಳಿವೆ . ಬದನೆಯನ್ನು ಸೇವಿಸುವುದರಿಂದಾಗುವ ಲಾಭಗಳೆಂದರೆ:
1.ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
2.100 ಗ್ರಾಂ. ಬದನೆಯಲ್ಲಿ 25 ಕ್ಯಾಲರಿ ಇರುವುದರಿಂದ ತೂಕ ಇಳಿಸುವುದರಲ್ಲಿ ಸಹಾಯವಾಗುತ್ತದೆ.
3.ಫೈಬರ್, ಪೊಟಾಷಿಯಮ್, ವಿಟಾಮಿನ್ ಬಿ-6 ಇರುವುದರಿಂದ ಹೃದಯಾಘಾತ, ಹೃದಯ ಸಂಬಂಧಿತ ಖಾಯಿಲೆಗಳನ್ನು ನಿವಾರಿಸುತ್ತದೆ.
4.ಷುಗರ್ ಅನ್ನು ನಿವಾರಿಸುತ್ತದೆ.
5.ಚರ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಪೋಷಕಾಂಶಗಳು (100 ಗ್ರಾಂ. ಬದನೆಯಲ್ಲಿ)
ಟೋಟಲ್ ಫ್ಯಾಟ್ – 27.5 ಗ್ರಾಂ.
ಸ್ಯಾಚುರೇಟೆಡ್ ಫ್ಯಾಟ್ – 5.2 ಗ್ರಾಂ.
ಕೊಲೆಸ್ಟ್ರಾಲ್ – 16 ಮಿ.ಗ್ರಾಂ.
ಸೋಡಿಯಂ – 62 ಮಿ.ಗ್ರಾಂ.
ಪೊಟ್ಯಾಷಿಯಂ – 618 ಮಿ.ಗ್ರಾಂ.
ಟೋಟಲ್ ಕಾರ್ಬೋಹೈಡ್ರೇಟ್ಸ್ – 17.8 ಗ್ರಾಂ.
ಡಯಟರಿ ಪೈಬರ್ – 4.9 ಗ್ರಾಂ.
ಪ್ರೊಟೀನ್ – 8 ಗ್ರಾಂ.
ಸಕ್ಕರೆ – 11.4 ಗ್ರಾಂ.

Comments are closed.