ಕರಾವಳಿ

ಉಡುಪಿಯ ಕೋಡಿಬೆಂಗ್ರೆ ಬೀಚ್ ಬಳಿ ಪ್ರವಾಸಿ ದೋಣಿ ದುರಂತ ಪ್ರಕರಣ: ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವ ಯುವತಿ ಸಾ*ವು

Pinterest LinkedIn Tumblr

ಉಡುಪಿ: ಇಲ್ಲಿನ ಮಲ್ಪೆ ಸಮೀಪದ ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೇರಿದೆ.

ಗಂಭೀರ ಸ್ಥಿತಿಯಲ್ಲಿದ್ದ ಮೈಸೂರಿನ ದಿಶಾ (23) ಎಂಬವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚಾಮರಾಜನಗರ ಮೂಲದ ಶಂಕರಪ್ಪ (27) ಮತ್ತು ಸಿಂಧು (25) ಅವರು ಸೋಮವಾರ ಮೃತಪಟ್ಟಿದ್ದರು.

ಘಟನೆ ವಿವರ: ಖಾಸಗಿ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದ 28 ಮಂದಿ ಪ್ರವಾಸ ನಿಮಿತ್ತ ಕರಾವಳಿಗೆ ಬಂದಿದ್ದರು. ರೆಸಾರ್ಟ್‌ವೊಂದರಲ್ಲಿ ಉಳಿದಿದ್ದ‌ ಇವರ ಪೈಕಿ ಎರಡು ಪ್ರತ್ಯೇಕ ಪ್ರವಾಸಿ ದೋಣಿಯಲ್ಲಿ  ವಿಹಾರಕ್ಕೆಂದ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. 14 ಮಂದಿ ಪ್ರವಾಸಿಗರಿದ್ದ ದೋಣಿ ಸಮುದ್ರ ಮಧ್ಯೆ ದೋಣಿ ಆಕಸ್ಮಿಕವಾಗಿ ಮುಳುಗಿದ್ದು, ಎಲ್ಲರೂ ನೀರಿಗೆ ಬಿದ್ದಿದ್ದಾರೆ. ಇದರಲ್ಲಿ ಒಂದಷ್ಟು ಮಂದಿಯನ್ನು ರಕ್ಷಿಸಲಾಗಿದ್ದು ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡು ಇಬ್ಬರು ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದರು. ಮಂಗಳವಾರ ದಿಶಾ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Comments are closed.