ಪ್ರಮುಖ ವರದಿಗಳು

ಪ್ರಧಾನಿ ಮೋದಿ ‘ಟೈಮ್ ವರ್ಷದ ವ್ಯಕ್ತಿ’

Pinterest LinkedIn Tumblr

mo

ನ್ಯೂಯಾರ್ಕ್‌: ಟೈಮ್ಸ್‌ ವರ್ಷದ ವ್ಯಕ್ತಿ 2016ರ ಆಯ್ಕೆಗಾಗಿ ನಡೆದ ಓದುಗರ ಅಭಿಮತದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿದ್ದಾರೆ. 18% ಮತಗಳಿಂದ ಮೋದಿ ಅವರನ್ನು ಟೈಮ್ಸ್‌ ಓದುಗರು ವರ್ಷದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಟೈಮ್ ಮ್ಯಾಗಜೀನ್ ನೀಡಿದ ಮಾಹಿತಿಯಂತೆ ಮೋದಿ ಶೇ 18 ರಷ್ಟು ಮತಗಳನ್ನು ರವಿವಾರ ಮಧ್ಯ ರಾತ್ರಿಯ ತನಕ ಪಡೆದಿದ್ದರು.ಟೈಮ್ ಮ್ಯಾಗಜೀನ್ ಇದರ ವರ್ಷದ ವ್ಯಕ್ತಿಯನ್ನು ಈ ವರ್ಷದ ಡಿಸೆಂಬರ್ ಏಳರಂದು ಘೋಷಿಸಲಾಗುವುದು ಹಾಗೂ ಈ ಆಯ್ಕೆಯನ್ನು ಮ್ಯಾಗಜೀನ್ ಸಂಪಾದಕರುಗಳು ಮಾಡಲಿದ್ದಾರೆ.

ರೀಡರ್ಸ್ ಪೋಲ್ ನಲ್ಲಿ ಮೋದಿತಮ್ಮ ಪ್ರತಿಸ್ಪರ್ಧಿಗಳಾದ ಬರಾಕ್ ಒಬಾಮ, ಡೊನಾಲ್ಡ್ ಟ್ರಂಪ್ ಮತ್ತು ಜೂಲಿಯನ್ ಅಸ್ಸಾಂಗೆ ಅವರಿಗಿಂತ ಬಹಳ ಮುಂದಿದ್ದರು. ಇಲ್ಲಿ ತಿಳಿಸಲಾದ ಮೂವರು ನಾಯಕರಿಗೆ 7 ಶೇಕಡಾ ಮತಗಳು ದೊರೆತಿದ್ದವು.ಅಂತೆಯೇ ಈ ರೀಡರ್ಸ್ ಪೋಲ್ ನಲ್ಲಿ ಮಾರ್ಕ್ ಝುಕರ್ ಬರ್ಗ್ (2%) ಹಾಗೂ ಹಿಲರಿ ಕ್ಲಿಂಟನ್ (4%) ಕ್ಕಿಂತಲೂ ಮೋದಿ ಬಹಳಷ್ಟು ಮುಂದಿದ್ದರು.

ಟೈಮ್ ವರ್ಷದ ವ್ಯಕ್ತಿಗಾಗಿ ನಡೆಯುವ ಆನ್ ಲೈನ್ ರೀಡರ್ಸ್ ಪೋಲ್ ನಲ್ಲಿ ಮೋದಿ ವಿಜೇತರಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಅವರು 2014 ರಲ್ಲಿ ಗೆದ್ದಿದ್ದು ಶೇ 16 ಮತಗಳನ್ನು ಪಡೆದಿದ್ದರು.

ಕಳೆದ ನಾಲ್ಕುವರ್ಷಗಳಿಂದ ಸತತವಾಗಿ ಮೋದಿ ಟೈಮ್ ವರ್ಷದ ವ್ಯಕ್ತಿಬಿರುದಿಗಾಗಿ ಸ್ಪರ್ಧೆಯಲ್ಲಿದ್ದಾರೆ. ಕಳೆದ ವರ್ಷ ಈ ಬಿರುದು ಜರ್ಮನ್ ಚಾನ್ಸಲರ್ ಏಂಜಲಾ ಮರ್ಕೆಲ್ ಅವರ ಪಾಲಿಗೆ ಹೋಗಿತ್ತು.

Comments are closed.