ಪ್ರಮುಖ ವರದಿಗಳು

ನೂರಾರು ಕೋಟಿ ರೂ.ವಂಚಿಸಿ 3 ಕೋಟಿಯ ಕಾರನ್ನು ಗೆಳತಿಗೆ ಉಡುಗೊರೆ ನೀಡಿದ್ದ ಸಾಗರ್ ಥಕ್ಕರ್ …ಈ ಕಾರನ್ನು ಯಾವ ಕ್ರಿಕೆಟಿಗನಿಂದ ಖರೀದಿಸಿದ್ದ ಗೊತ್ತಾ ?

Pinterest LinkedIn Tumblr

sagar-reema

ಮುಂಬೈ: ನಕಲಿ ಕಾಲ್ ಸೆಂಟರ್ ಸ್ಥಾಪಿಸಿ ನೂರಾರು ಕೋಟಿ ವಂಚನೆ ಮಾಡಿದ್ದ ಸಾಗರ್ ಥಕ್ಕರ್ ಅಲಿಯಾಸ್ ಷಾಗ್ಗಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ 3 ಕೋಟಿ ರುಪಾಯಿಯ ಆಡಿ ಆರ್8 ಕಾರನ್ನು ಖರೀದಿಸಿ ಕಾರನ್ನು ಗೆಳತಿಗೆ ಉಡುಗೊರೆ ನೀಡಿದ್ದ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಸಾಗರ್ ಥಕ್ಕರ್ ಹಿನ್ನೆಲೆ ವಿರಾಟ್ ಕೊಹ್ಲಿ ಅವರಿಗೆ ತಿಳಿದಿರಲಿಲ್ಲ. ಅಲ್ಲದೆ ಈ ಹಗರಣಕ್ಕೆ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಥಕ್ಕರ್ ವಿರಾಟ್ ಕೊಹ್ಲಿಯಿಂದ ಕಾರು ಖರೀದಿಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರರಾಗ್ ಮನೆರೇ ಹೇಳಿದ್ದಾರೆ.

ಥಾಣೆಯಲ್ಲಿ ನಕಲಿ ಕಾಲ್ ಸೆಂಟರ್ ಸ್ಥಾಪಿಸಿದ್ದ ಸಾಗರ್ ಥಕ್ಕರ್ ಅಮೆರಿಕನ್ನರಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಟೋಪಿ ಹಾಕಿದ್ದ. ಸದ್ಯ ಆ ಹಣದಲ್ಲಿ ಥಕ್ಕರ್ ದುಬೈನಲ್ಲಿ ತನ್ನ ಹೊಸ ವ್ಯಾಪಾರವನ್ನು ಆರಂಭಿಸಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.

Comments are closed.