ಕರ್ನಾಟಕ

ನರಕ ಚತುರ್ದಶಿಯ ಅಭ್ಯಂಗ ಸ್ನಾನ ಯಾಕೆ ಮಾಡಬೇಕು ಗೋತ್ತೆ…!

Pinterest LinkedIn Tumblr

oil_bath_1

ಮಂಗಳೂರು: ನಾಡಿನೆಲ್ಲೆಡೆ ನರಕ ಚತುರ್ದಶಿ ಆಚರಣೆಯನ್ನು ಸಾಂಪ್ರದಾಯಿಕ ವಿಧಿ ವಿಧಾನದ ಮೂಲಕ ಆಚರಿಸಲಾಗುತ್ತಿದೆ. ಹಾಗಿದ್ದರೆ ಈ ನರಕ ಚತುದರ್ಶಿ ಆಚರಣೆ ಬಂದಿದ್ದು ಹೇಗೆ ? ಯಾರಿಂದ ಈ ನರಕ ಚತುದರ್ಶಿ ಬಂತು ಎಂಬುದರ ಕುರಿತು ಓದಿ….

ಶ್ರೀಮದ್ಭಾಗವತದಲ್ಲಿ ಪ್ರಸ್ತಾಪವಾದ ವಿಷಯದಂತೆ ‘ಒಂದು ಕಾಲದಲ್ಲಿ ಪ್ರಾಗ್ಜ್ಯೋತಿಷಪುರದಲ್ಲಿ ಭೌಮಾಸುರ (ನರಕಾಸುರ) ಎಂಬ ಬಲಿಷ್ಠ ಅಸುರನು ರಾಜ್ಯವಾಳುತ್ತಿದ್ದ. ಮಾನವರಿಗೆ ಮತ್ತು ದೇವತೆಗಳಿಗೆ ಇವನಿಂದ ಸಾಕಷ್ಟು ತೊಂದರೆ ಎದುರಾಗುತ್ತಿತ್ತು. ಈತ ಸ್ತ್ರೀಯರು, ವೃದ್ಧರು, ಬಾಲಕರನ್ನೂ ಬಿಡದೇ ಕಾಡುತ್ತಿದ್ದ. ನರಕಾಸುರ 16 ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ಅವರನ್ನು ಮದುವೆಯಾಗಲು ಮುಂದಾದ. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ಈ ವಿಷಯ ತಿಳಿದ ತಕ್ಷಣ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಅಸುರನ ವಿರುದ್ಧ ಯುದ್ಧ ಸಾರಿದನು. ಯುದ್ಧದಲ್ಲಿ ನರಕಾಸುರನನ್ನು ವಧಿಸಿ, ಅವನು ಬಂಧಿಸಿಟ್ಟ ರಾಜ ಕನ್ಯೆಯರನ್ನು ಶ್ರೀಕೃಷ್ಣನು ಬಂಧಮುಕ್ತಗೊಳಿಸಿದ.

ಯುದ್ಧದಲ್ಲಿ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀಕೃಷ್ಣನಲ್ಲಿ ಒಂದು ವರವನ್ನು ಕೇಳಿ ಪಡೆದುಕೊಂಡನಂತೆ. ಅದೇನೆಂದರೆ ‘ಈ ದಿನ (ತಿಥಿಯಂದು) ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗಬಾರದು’ ಎಂಬುವುದು ಆ ವರವಾಗಿತ್ತು. ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಅವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದ ವ್ಯಕ್ತಪಡಿಸಿದರು. ಆದ್ದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ. ಜನರು ಅ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಯಮತರ್ಪಣೆ:
ಅಭ್ಯಂಗ ಸ್ನಾನದ ನಂತರ ಅಪಮೃತ್ಯು (ಅಕಾಲ ಮೃತ್ಯು) ಬಾರದಿರುವಂತೆ ಯಮತರ್ಪಣೆಯನ್ನು ನೀಡಲು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ವಿಧಿಯನ್ನು ಪಂಚಾಂಗದಲ್ಲಿ ನೀಡಲಾಗುತ್ತದೆ, ಅದನ್ನು ಅನುಸರಿಸಿ ತರ್ಪಣೆಯನ್ನು ನೀಡಬೇಕು. ಅದಾದ ನಂತರ ತಾಯಂದಿರು ತಮ್ಮ ಮಕ್ಕಳಿಗೆ ಆರತಿಯನ್ನು ಬೆಳಗುತ್ತಾರೆ. ಕೆಲವರು ಅಭ್ಯಂಗ ಸ್ನಾನದ ನಂತರ ನರಕಾಸುರನ ವಧೆಯ ಪ್ರತೀಕವೆಂದು ಕಾರಿಟ್ (ಒಂದು ರೀತಿಯ ಕಾಯಿ) ಅನ್ನು ಕಾಲಿನಿಂದ ಜಜ್ಜಿ, ಒದೆಯುತ್ತಾರೆ. ಇನ್ನೂ ಕೆಲವರು ಅದನ್ನು ಜಜ್ಜಿ ಅದರ ರಸವನ್ನು (ರಕ್ತದ ಸಂಕೇತವಾಗಿ) ನಾಲಿಗೆಗೆ ಹಚ್ಚಿಕೊಳ್ಳುತ್ತಾರೆ.

ಪವಿತ್ರ ಆಚರಣೆ:
ಆಶ್ವೀಜ ಅಥವಾ ಅಶ್ವಯುಜ ಮಾಸದ ಕೃಷ್ಣಪಕ್ಷ (14 ನೇ) ನರಕ ಚತುರ್ದಶಿ ಎಂದೂ, ಅಮಾವಾಸ್ಯೆ ಮರುದಿನ ದೀಪಾವಳಿ ಎಂದೂ ಆಚರಿಸಿಕೊಂಡು ಬರಲಾಗಿದೆ. ನರಕ ಚತುರ್ದಶಿ ತಿಥಿ, ಮರುದಿನ ದೀಪಾವಳಿ ಅಮವಾಸ್ಯೆ, ಮರು ದಿನವೇ ಬಲಿಪಾಡ್ಯಮಿ ಆಚರಿಸಲಾಗುತ್ತಿದೆ. ಇನ್ನೂ ನರಕ ಚತುರ್ದಶಿಯ ಹಿಂದಿನ ದಿನ ನೀರು ತುಂಬುವ ಹಬ್ಬ. ಅದು ಗಂಗೆಯು ತ್ರಿವಿಕ್ರಮ ದೇವರ ಪಾದದಿಂದ ಜನಿಸಿದ ದಿನ, ಆ ಕಾರಣಕ್ಕೆ ಹಿರಿಯರು ಅಂದು ಗಂಗಾ ಸ್ಮರಣೆ ಮಾಡಲಾಗುತ್ತದೆ ಎನ್ನುತ್ತಾರೆ

ಇನ್ನು ನರಕ ಚತುರ್ದಶಿಯಂದು ಶ್ರೀ ಕೃಷ್ಣನು ಜರಾಸಂಧನೆಂಬ ನರಕಾಸುರನನ್ನು ಭೀಮಸೇನನ ಕೈಯಿಂದ ಕೊಲ್ಲಿಸಿ, ಅಲ್ಲಿ ಬಂಧಿತರಾದ ಕನ್ಯೆಯರಿಗೆ ಬಿಡುಗಡೆ ಮತ್ತು ಅವರಿಗೆ ತನ್ನ ಪತಿತ್ವ ನೀಡಿ ರಕ್ಷೆ ಮಾಡಿದ ದಿವಸ. ಇದು ಸ್ತ್ರೀ ಕುಲದ ಸಂರಕ್ಷಣೆ, ಅಸುರ ನಿಗ್ರಹದ ಸಂದೇಶ ಕೊಡುತ್ತದೆ ಎನ್ನುತ್ತಾರೆ ಅವರು.

Comments are closed.