ಪ್ರಮುಖ ವರದಿಗಳು

ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕವೂ ಗರ್ಭಿಣಿಯಾದ ಮಹಿಳೆ !

Pinterest LinkedIn Tumblr

PREGNANT

ಮುಜಾಫರ್‌ನಗರ: ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕವೂ ಮಹಿಳೆಯೊಬ್ಬರು ಗರ್ಭಿಣಿಯಾದ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯವೊಂದು ವೈದ್ಯನಿಗೆ ದಂಡ ಹಾಕುವ ಮೂಲಕ ಶಿಕ್ಷೆ ನೀಡಿದೆ.

2013ರಲ್ಲಿ ಮಂಜು ಅಗ್ಗರ್ವಾಲ್ ಎಂಬ ವೈದ್ಯನ ಬಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದೆ. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕವೂ ನನಗೆ ಮಗುವಾಗಿದೆ ಎಂದು ಹೇಳಿ ಸುನಿತಾ ದೇವಿ ಎಂಬುವವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದರಂತೆ ವಿಚಾರಣೆ ನಡೆಸಿರುವ ನ್ಯಾಯಾಲಯವು ಶಸ್ತ್ರಚಿಕಿತ್ಸೆ ವೇಳೆ ವೈದ್ಯ ತೋರಿದ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದು, ತಿಂಗಳೊಳಗಾಗಿ ಸುನಿತಾ ದೇವಿ ಅವರಿಗೆ ರು.1,12,000 ಹಣವನ್ನು ನೀಡುವಂತೆ ಶಿಕ್ಷೆ ನೀಡಿದೆ.

Comments are closed.