ಮುಂಬೈ: ನಾನೊಬ್ಬ ಶಾಂತಿಯುತ ಸಂದೇಶ ಸಾರುವ ಸಂದೇಶಗಾರನಾಗಿದ್ದು, ಉಗ್ರರರನ್ನು ಎಂದಿಗೂ ಪ್ರೇರೇಪಿಸಿಲ್ಲ ಎಂದು ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯಕ್ ಅವರು ಶುಕ್ರವಾರ ಹೇಳಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಉಗ್ರರಿಗೆ ಪ್ರೇರಣೆ ಆರೋಪ ಕುರಿತಂತೆ ಸ್ಕೈಪ್ ಮೂಲಕ ಉತ್ತರ ನೀಡಿರುವ ಅವರು, ಆರೋಪಗಳ ಕುರಿತಂತೆ ಮಾತನಾಡುವುದಕ್ಕೂ ಮುನ್ನ ಫ್ರಾನ್ಸ್ ನೀಸ್ ನಲ್ಲಾಗಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಸ್ಲಾಂ-ವಿರೋಧಿಗಳು ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾರೆ. ಇದನ್ನು ನಾನು ವಿರೋಧಿಸುತ್ತೇನೆಂದು ಹೇಳಿದ್ದಾರೆ.
ಮುಗ್ಧ ಜನರನ್ನು ಕೊಲ್ಲುವ ಆತ್ಮಾಹುತಿ ದಾಳಿಗೆ ಇಸ್ಲಾಂ ನಲ್ಲಿ ಅನುಮತಿ ಇಲ್ಲ. ರಾಷ್ಟ್ರವನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಆತ್ಮಾಹುತಿ ದಾಳಿಯನ್ನು ಯುದ್ಧದ ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮ ಮುಗ್ಧ ಜನರು ಬಲಿಯಾಗುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ ವಿಚಾರ.
ನನ್ನ ಭಾಷಣದಿಂದ ಯಾವುದೇ ಉಗ್ರರನ್ನು ಪ್ರೇರೇಪಿತಗೊಳ್ಳುವಂತೆ ನಾನು ಮಾಡಿಲ್ಲ. ನನ್ನ ವಿರುದ್ಧ ಸಂಚು ರೂಪಿಸಲಾಗಿದೆ. ನಾನೊಬ್ಬ ಶಾಂತಿ ಸಾರುವ ಸಂದೇಶಗಾರನಾಗಿದ್ದು, ಉಗ್ರವಾದವನ್ನು ಎಂದಿಗೂ ಬೆಂಬಲಿಸುವುದಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ ಉಗ್ರ ದಾಳಿ ನಡೆದರೂ ಅದನ್ನು ನಾನು ಖಂಡಿಸುತ್ತೇನೆಂದು ಹೇಳಿದ್ದಾರೆ.
Comments are closed.