ಪ್ರಮುಖ ವರದಿಗಳು

ಇಸ್ತಾನ್ ಬುಲ್ ಬಾಂಬ್ ದಾಳಿಯ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ ಹೃತಿಕ್ ರೋಷನ್!

Pinterest LinkedIn Tumblr

hrithikkidsdisneyland

ನವದೆಹಲಿ: 38 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಇಸ್ತಾನ್ ಬುಲ್ ತ್ರಿವಳಿ ಆತ್ಮಹತ್ಯಾ ಬಾಂಬ್ ದಾಳಿಯಿಂದ ಖ್ಯಾತ ಬಾಲಿವುಡ್ ಹೃತಿಕ್ ರೋಷನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಮಕ್ಕಳಾದ ಹೃದಾನ್ ಮತ್ತು ಹೆೃರಾನ್ ರೊಂದಿಗೆ ವಿದೇಶಕ್ಕೆ ಹಾರಿದ್ದ ನಟ ಹೃತಿಕ್ ರೋಷನ್ ತಮ್ಮ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸುವ ವೇಳೆ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ಅಷ್ಟು ಹೊತ್ತಿಗಾಗಲೇ ವಿಮಾನ ನಿಲ್ದಾಣದಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿಯಾಗಿತ್ತು. ಹೀಗಾಗಿ ವಿಮಾನ ನಿಲ್ದಾಣವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಿದ ಪರಿಣಾಮ ಹೃತಿಕ್ ರೋಷನ್ ಅವರ ಸಂಪರ್ಕ ವಿಮಾನ (ಕನೆಕ್ಟಿಂಗ್ ಫ್ಲೈಟ್) ವಿಮಾನ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದು, ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ನೋವಾಯಿತು. ಉಗ್ರ ಚಟುವಟಿಕೆ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಹೃತಿಕ್ ಕರೆ ನೀಡಿದ್ದಾರೆ.

ಪ್ರಸ್ತುತ ಹೃತಿಕ್ ರೋಷನ್ ಮತ್ತು ಅವರ ಮಕ್ಕಳು ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.

Comments are closed.