
ಲಂಡನ್ : ವಯಾಗ್ರಕ್ಕೆ ಈಗ ಹೊಸ ರೂಪ. ಇದನ್ನು ಹೊಟ್ಟೆಯ ಮೇಲೆ ಅಂಟಿಸಿಕೊಂಡರೆ ಸಾಕು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.
ಕಳೆದ 20 ವರ್ಷಗಳಿಂದ ಮೂಲತಃ ವಯಾಗ್ರವು ಬಣ್ಣದ ಮಾತ್ರೆಗಳ ರೂಪದಲ್ಲಿ ಇರುತ್ತಿತ್ತು. ಅಲ್ಲದೆ ಕೆಲವು ಮಾತ್ರೆಗಳಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿದ್ದವು. ಆದರೆ ಈಗ ವಿಜ್ಞಾನಿಗಳ ತಂಡ ಪರಿಶೋಧಿಸಲಾಗಿರುವ ವಯಾಗ್ರವು ಪ್ಲಾಸ್ಟಿಕ್ ರೂಪದಲ್ಲಿದ್ದು ನುಂಗುವ ಅವಶ್ಯಕತೆಯಿಲ್ಲ ಕೇವಲ ಹೊಟ್ಟೆಯ ಮೇಲೆ ಅಂಟಿಸಿಕೊಂಡರೆ ಸಾಕು ಗಂಟೆಗಟ್ಟಲೆ ಸಾಕಾಗುವಷ್ಟು ಲೈಂಗಿಕ ಶಕ್ತಿ ದೊರಕುತ್ತದೆ.
ಈಗ ಲಭ್ಯವಾಗುವ ಹಳೆಯ ರೂಪದ ಮಾತ್ರೆಗಳಿಂದ ಮೈಗ್ರೇನ್, ಅಜೀರ್ಣ, ದೃಷ್ಟಿ ಮಂದತೆ, ಮೈಕೈ ನೋವುಗಳು ಉಂಟಾಗುತ್ತಿದ್ದವು. ಆದರೆ ಇವೆಲ್ಲ ನೋವುಗಳು ಪ್ಲಾಸ್ಟಿಕ್ ರೂಪದ ಮಾತ್ರೆಗಳಿಂದ ಉಂಟಾಗುವುದಿಲ್ಲ.
10 ಗಂಟೆಗಳ ಕಾಲ ಲೈಂಗಿಕ ಶಕ್ತಿ
ಪ್ಲಾಸ್ಟಿಕ್ ರೂಪದ ಮಾತ್ರೆಗಳನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು 10 ಗಂಟೆಗಳಿಗಿಂತ ಹೆಚ್ಚು ಕಾಲ ಲೈಂಗಿಕ ಶಕ್ತಿ ದೊರಕುವುದು ಸಾಬೀತಾಗಿದೆ.
Comments are closed.