ಕರ್ನಾಟಕ

ಇಂದು ನಟ ಸುದೀಪ್ ದಂಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಿಚಾರಣೆ

Pinterest LinkedIn Tumblr

sudeep

ಬೆಂಗಳೂರು: ನಟ ಸುದೀಪ್ ದಂಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಿಚಾರಣೆ ಇಂದು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಲಿದೆ.

ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್ ಇಂದು ಕೋರ್ಟ್‍ಗೆ ಹಾಜರಾಗುವ ಸಾಧ್ಯತೆ ಇದ್ದು, ನ್ಯಾಯಾಧೀಶರ ಮುಂದೆ ತಮ್ಮ ಹೇಳಕೆ ನೀಡಲಿದ್ದಾರೆ. 2015 ರ ಸೆಪ್ಟೆಂಬರ್ ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹದಿನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ಸುದೀಪ್ ದಂಪತಿ ಮುಂದಾಗಿದ್ರು.

ಕಳೆದ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ವಿಚ್ಛೇದನ ಅರ್ಜಿ ವಿಚಾರಣೆಗೆ ದಂಪತಿ ಹಾಜರಾಗದ ಕಾರಣ, ಬೆಂಗಳೂರಿನ ಒಂದನೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಸುದೀಪ್ ಪರವಾಗಿ ಅವರ ಸೋದರಿ ಪವರ್ ಆಫ್ ಅಟಾರ್ನಿ ಪಡೆದು ವಿಚ್ಛೇದನ ಅರ್ಜಿ ಸಲ್ಲಿಸಿದ್ರು. ಕಳೆದ ಎರಡು ಬಾರಿ ವಿಚಾರಣೆ ಹಾಜರಾಗದ ಕಾರಣ ಇಂದು ಸುದೀಪ್ ದಂಪತಿ ಬಹುತೇಕ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

Comments are closed.