ಆರೋಗ್ಯ

ರಾಜ್ಯದಲ್ಲಿ ಕೊರೋನಾರ್ಭಟ; ಬೆಂಗಳೂರಿನಲ್ಲಿ 15,617 ಪ್ರಕರಣ ಸೇರಿ ರಾಜ್ಯದಲ್ಲಿಂದು 21,390 ಪಾಸಿಟಿವ್ ಕೇಸು

Pinterest LinkedIn Tumblr

ಬೆಂಗಳೂರು: ಬುಧವಾರವೂ ಕೂಡ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ 21,390 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು 15,617 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಬುಧವಾರ 10 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ 10.96% ಗೆ ಏರಿಕೆಯಾಗಿದೆ. ಇಂದು 1,541 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ 93,009 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರೊಂದೆಲ್ಲೇ 73 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ.

10 ಮಂದಿ ಸಾವನ್ನಪ್ಪಿದವರ ಪೈಕಿ 6 ಮಂದಿ ಬೆಂಗಳೂರಿನವರಾಗಿದ್ದಾರೆ. ಇಂದು 1,95,047 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 

Comments are closed.