ಕರಾವಳಿ

ಗೋಕಳ್ಳರ ಕುತಂತ್ರ ಬಯಲು; ಜಾನುವಾರು ಸಾಗಿಸುತ್ತಿದ್ದ ಪಿಕಪ್’ಗೆ ಮದುವೆ ಗಾಡಿಯಂತೆ ಸಿಂಗರಿಸಿದ ಇನ್ನೋವಾ ಕಾರು ಬೆಂಗಾವಲು..!

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಎಗ್ಗಿಲ್ಲದೆ ದನ ಕಳ್ಳರ ಹಾವಳಿ ಮುಂದುವರೆದಿದೆ. ಜ.12 ಬುಧವಾರ ಉಡುಪಿ ಜಿಲ್ಲೆ ಶಿರ್ವದಲ್ಲಿ ಗೋಕಳ್ಳರ ವಿನೂತನ ರೀತಿಯ ಕೈಚಳಕ ಬಯಲಾಗಿದೆ.

ಮದುವೆ ರೀತಿ ಸಿಂಗರಿಸಿದ ಇನ್ನೋವಾ ಕಾರಿನ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿದ್ದುದು ಕಂಡು ಒಂದು ಕ್ಷಣಕ್ಕೆ ಎಲ್ಲರೂ ದಂಗಾಗಿದ್ದಾರೆ. ಅಕ್ರಮ ಗೋ ಸಾಗಾಟಕ್ಕೆ ವಿವಿಧ ರೀತಿಯ ವಾಮ ಮಾರ್ಗಗಳನ್ನು ಖತರ್ನಾಕ್ ಗೋ ಕಳ್ಳರು ಮಾಡುತ್ತಿರುವುದು ಈ ಪ್ರಕರಣದ ಮೂಲಕ ಮತ್ತೆ ಸಾಭೀತಾಗಿದೆ.

ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾದ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 16 ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ರೀತಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪೊಲೀಸರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರ ಕಣ್ಣು ತಪ್ಪಿಸುವ ಸಲುವಾಗಿ ಗೋಕಳ್ಳರು ಈ ರೀತಿ ಹೊಸ ತಂತ್ರ ಮಾಡಿದ್ದಾರೆ. ಹಿಂಸಾತ್ಮಕ ಸಾಗಾಟದ ವೇಳೆ‌ ಎರಡು‌ ಜಾನುವಾರು ಮೃತಪಟ್ಟಿದೆ ಎನ್ನಲಾಗಿದೆ. ಆರೋಪಿಗಳು ಪರಾರಿಯಾದ ಬಗ್ಗೆ ತಿಳಿದುಬಂದಿದೆ.

ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.