ಕರ್ನಾಟಕ

ಅಪಘಾತದಲ್ಲಿ ಸತ್ತ ಅಣ್ಣನ ಮೃತದೇಹ ನೋಡಿ ಆಘಾತಕ್ಕೊಳಗಾದ ತಂಗಿ ಸಾವು

Pinterest LinkedIn Tumblr

ಮೈಸೂರು: ಅಣ್ಣನ ಮೃತದೇಹ ನೋಡಿ ಆಘಾತದಿಂದ ತಂಗಿ ಮೃತಪಟ್ಟಿದ್ದಾಳೆ. ಅಂತ್ಯ ಸಂಸ್ಕಾರಕ್ಕೆ‌ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ(21) ಅಣ್ಣ ಕೀರ್ತಿ(28) ಮೃತದೇಹ ನೋಡಿ ಸಾವನ್ನಪ್ಪಿದ್ದಾಳೆ.

ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೀರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ. ಹಾಗೂ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಇಂದು ಕೀರ್ತಿ ಅಂತ್ಯ ಸಂಸ್ಕಾರಕ್ಕೆ‌ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ ಅಣ್ಣನ ಮೃತ ದೇಹ ನೋಡಿ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ.

ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.