ಆರೋಗ್ಯ

ಮಹಾರಾಷ್ಟ್ರದ 10 ಸಚಿವರು ಮತ್ತು 20 ಶಾಸಕರಿಗೆ ಕೊರೋನಾ ಪಾಸಿಟಿವ್: ಕೋವಿಡ್ ನಿಯಮ ಪಾಲಿಸಲು ಸರಕಾರ ಸೂಚನೆ

Pinterest LinkedIn Tumblr

ಮುಂಬಯಿ: ಮಹಾರಾಷ್ಟ್ರ ಸರ್ಕಾರದ 10ಕ್ಕೂ ಹೆಚ್ಚು ಸಚಿವರು ಮತ್ತು ಸುಮಾರು 20 ಶಾಸಕರು ಈವರೆಗೂ ಕೊರೊನಾ ವೈರಸ್ ಪಾಸಿಟಿವ್‌ಗೆ ತುತ್ತಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಮೇಲೆ ಸರ್ಕಾರ ಗಮನ ಹರಿಸಿದೆ. ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಮುಂದುವರಿದರೆ ಕಠಿಣ ನಿರ್ಬಂಧಗಳು ಜಾರಿಗೆ ಬರಲಿವೆ. ಈ ಕಠಿಣ ಕ್ರಮಗಳನ್ನು ತಪ್ಪಿಸಲು ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.

ಈವರೆಗೂ 10ಕ್ಕೂ ಹೆಚ್ಚು ಸಚಿವರು ಮತ್ತು 20ಕ್ಕೂ ಅಧಿಕ ಶಾಸಕರು ಕೋರೊನಾ ವೈರಸ್ ಪಾಸಿಟಿವ್‌ಗೆ ಒಳಪಟ್ಟಿದ್ದಾರೆ. ಪ್ರತಿಯೊಬ್ಬರೂ ಹೊಸ ವರ್ಷ, ಹುಟ್ಟು ಹಬ್ಬ ಹಾಗೂ ಇತರೆ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಲು ಬಯಸುತ್ತಾರೆ. ಹೊಸ ತಳಿ ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ಈ ಕಾರಣಕ್ಕಾಗಿ ಎಚ್ಚರಿಕೆ ಅಗತ್ಯ ಎಂದರು.

Comments are closed.