ಆರೋಗ್ಯ

ತಮಿಳು ಹಾಸ್ಯನಟ ವಡಿವೇಲುಗೆ ಕೊರೋನಾ ಪಾಸಿಟಿವ್; ಆಸ್ಪತ್ರೆಗೆ ದಾಖಲು

Pinterest LinkedIn Tumblr

ಚೆನ್ನೈ: ತಮಿಳು ಹಾಸ್ಯ ನಟ ವಡಿವೇಲು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಲಂಡನ್‌ನಿಂದ ಚೆನ್ನೈಗೆ ಮರಳಿದ್ದ ವಡಿವೇಲು ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಮಾಡಲಾಗಿದ್ದು ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ನಟನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಡಿವೇಲುಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ತಮಿಳು ಸಿನಿಮಾ ‘ನಾಯ್ ಶೇಖರ್ ರಿಟರ್ನ್ಸ್’ ಚಿತ್ರೀಕರಣಕ್ಕೆಂದು ವಡಿವೇಲು ಲಂಡನ್ನಿಗೆ ತೆರಳಿದ್ದರು.

Comments are closed.