ಕರಾವಳಿ

ಚಿಕ್ಕಮಗಳೂರು-ಉಡುಪಿ ಸಂಚರಿಸುತ್ತಿರುವಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಹೃದಯಾಘಾತದಿಂದ ದುರ್ಮರಣ

Pinterest LinkedIn Tumblr

ಚಿಕ್ಕಮಗಳೂರು: ಸರಕಾರಿ ಬಸ್ ನಿರ್ವಾಹಕರೊಬ್ಬರು ಬಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವಿಗೀಡಾದ ದುರ್ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ಘಟನೆ ಸಂಭವಿಸಿದೆ.

ವಿಜಯ್ (43) ಹೃದಯಾಘಾತದಿಂದ ಸಾವನ್ನಪ್ಪಿರುವ ನಿರ್ವಾಹಕ. ವಿಜಯ್ ಚಿಕ್ಕಮಗಳೂರು-ಉಡುಪಿ ಕೆಎಸ್​ಆರ್​​ಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಬಸ್​ನಲ್ಲಿ ಈ ಘಟನೆ ನಡೆದಿದೆ.

ಬಳಿಕ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್​ನ ಮಲಯ ಮಾರುತ ಬಳಿ ಎದೆ ನೋವಿನ ಕುರಿತು ನಿರ್ವಾಹಕ ತಿಳಿಸಿದ್ದಾರೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಬೆಳಗ್ಗೆ 8.15ರ ಸುಮಾರಿಗೆ ಹೃದಯಾಘಾತದಿಂದ ಕಂಡಕ್ಟರ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.