ಉಡುಪಿ: ಬ್ರಹ್ಮಾವರ ಆಕಾಶವಾಣಿ ಕೇಂದ್ರದಲ್ಲಿನ ಸೊತ್ತುಗಳು ಕಳವಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರದ ಏರಿಯಲ್ ಪೀಲ್ಡ್ನಲ್ಲಿ ಟ್ರಾನ್ಸ್ಮೀಟರ್ಗೆ ಆಳವಡಿಸಿದ್ದ ಸುಮಾರು 40ಕೆ.ಜಿ. ತೂಕದ 50 ಅಡಿ ಉದ್ದದ ತಾಮ್ರದ ಪಟ್ಟಿಗಳು ಕಳ್ಳತನ ವಾಗಿರುವುದು ಕಂಡುಬಂದಿವೆ. ಇವುಗಳ ಒಟ್ಟು ಮೌಲ್ಯ 20,000 ರೂ. ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರದ ಸಹಾಯಕ ಇಂಜಿನಿಯರ್ ಕೆ.ಆರ್.ತಂತ್ರಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.