ಆರೋಗ್ಯ

ಮೈಸೂರಿನಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆ; ವಿದೇಶದಿಂದ ಬಂದ 9 ವರ್ಷದ ಮಗುವಿಗೆ ಪಾಸಿಟಿವ್

Pinterest LinkedIn Tumblr

ಮೈಸೂರು: ಕೊರೋನಾ ರೂಪಾಂತರಿ ಓಮಿಕ್ರಾನ್​ ವೈರಸ್​ ಈಗಾಗಲೇ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಬೆಂಗಳೂರು, ಭದ್ರಾವತಿ ಮೊದಲಾದೆಡೆ ಕಾಣಿಸಿಕೊಂಡಿದ್ದು ಇದೀಗಾ ಸೋಂಕು ಮೈಸೂರಿನಲ್ಲಿ ಕೂಡ ಪತ್ತೆಯಾಗಿದೆ.

ಸಾಂಸ್ಕೃತಿಕ ನಗರಿ‌ ಮೈಸೂರಿನಲ್ಲಿ ಮೊದಲ ಓಮಿಕ್ರಾನ್ ವೈರಸ್​​ ಪತ್ತೆಯಾಗಿದ್ದು, ವಿದೇಶದಿಂದ ಬಂದಿದ್ದ 9 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುದಾಬಿಗೆ ತೆರಳಿದ್ದರು ಎನ್ನಲಾಗಿದೆ.

ಸೋಂಕಿತ ಮಗುವಿಗೆ ಯಾವುದೇ ಲಕ್ಷಣಗಳಿಲ್ಲ. ವೈದ್ಯರು ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

 

Comments are closed.