Mumbai

ಮಗನಿಗಾಗಿ ಗುಜರಿ ವಸ್ತು ಬಳಸಿ ಜೀಪ್ ಮಾದರಿಯ ವಾಹನ ತಯಾರಿಸಿದ ವ್ಯಕ್ತಿಗೆ ಆನಂದ ಮಹೀಂದ್ರಾ ಕೊಟ್ರು‌ ಬಿಗ್ ಆಫರ್..!

Pinterest LinkedIn Tumblr

ಮುಂಬೈ: ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ತಮ್ಮ‌ ಮಗನ ಆಸೆ ಪೂರೈಸಲು ಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನವು ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಫ್ ಅಧ್ಯಕ್ಷ ಆನಂದ್‌ ಮಹೀಂದ್ರ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಾಹನವನ್ನು ಕೇವಲ 60,000 ರೂಗಳಲ್ಲಿ ತಯಾರಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿರುವಂತೆ ಈ ನಾಲ್ಕು ಚಕ್ರದ ವಾಹನದಲ್ಲಿಯೂ ಕಿಕ್‌–ಸ್ಟಾರ್ಟ್‌ ಕಾರ್ಯವಿಧಾನವನ್ನು ಅಳವಡಿಸಲಾಗಿದೆ. ಈ ನಾಲ್ಕು ಚಕ್ರದ ವಾಹನವು ಲೆಫ್ಟ್ ಡ್ರೈವ್ (ಎಡಬದಿಯಲ್ಲಿ ಸ್ಟಿಯರಿಂಗ್) ಆಗಿದೆ. ಈ ವಾಹನವನ್ನು ಹಳೆಯ ಕಾರಿನ ಭಾಗಗಳನ್ನು ಹಾಗೂ ಗುಜರಿ ವಸ್ತುಗಳನ್ನು ಬಳಸಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಈ ವಾಹನ ಮತ್ತು ಅದನ್ನು ನಿರ್ಮಿಸಿದ ದತ್ತಾತ್ರೇಯ ಲೋಹರ್ ಅವರು ಕೂಡ‌ ಇರುವ 45 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ ಅನ್ನು ಆನಂದ್‌ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಪ್ರಶಂಸಿಸಿದ್ದಾರೆ.

‘ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ. ಲೋಹರ್ ಅವರಿಗೆ ಬೊಲೆರೊ ವಾಹನವನ್ನು ನೀಡುವುದಾಗಿಯೂ ಆನಂದ್‌ ಮಹೀಂದ್ರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

”ಈ ವಾಹನ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಕಾರಣ ಅಧಿಕಾರಿಗಳು ಇದನ್ನು ತಡೆಯುತ್ತಾರೆ. ಹಾಗಾಗಿ ನಾನು ವೈಯಕ್ತಿಕವಾಗಿ ಆ ವ್ಯಕ್ತಿಗೆ ಬೋಲೆರೊವನ್ನು ವಿನಿಮಯವಾಗಿ ನೀಡುತ್ತೇನೆ. ಅವರ ಈ ವಾಹನದ ಸೃಷ್ಟಿ ನಮಗೆ ಸ್ಫೂರ್ತಿ ನೀಡಿದೆ.‌ ಇದನ್ನು MahindraResearchValley ನಲ್ಲಿ ಪ್ರದರ್ಶಿಸಬಹುದು. ಏಕೆಂದರೆ ‘ಸಂಪನ್ಮೂಲ’ ಎಂದರೆ ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚಿನದನ್ನು ಮಾಡುವುದು’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

(ಆನಂದ್ ಮಹೀಂದ್ರಾ)

ದತ್ತಾತ್ರೇಯ ಲೋಹರ್ ಅವರು ತಮ್ಮ ಮಗನ ಆಸೆಯನ್ನು ಈಡೇರಿಸಲು ಈ ವಾಹನವನ್ನು ತಯಾರಿಸಿದ್ದಾರೆ. ಯೂಟ್ಯೂಬ್ ಚಾನೆಲ್ ‘ಹಿಸ್ಟೋರಿಕಾನೊ’ ವರದಿ ಪ್ರಕಾರ ಲೋಹರ್ ಅವರು ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ಕಮ್ಮಾರರ ಕುಟುಂಬದವರು.

 

Comments are closed.