ಮಂಗಳೂರು: ನಗರದ ಬಂದರ್ ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ನಲ್ಲಿ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಗುರುವಾರ ತಿಳಿಸಿದ್ದಾರೆ.
ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗರಿ ಮನೋಹರ್ (21), ವುಟುಕೋರಿ ಜಾಲಯ್ಯ (30), ಕರ್ಪಿಂಗಾರಿ ರವಿ (27) ಮತ್ತು ಪ್ರಳಯ ಕಾವೇರಿ ಗೋವಿಂದಯ್ಯ (47) ಬಂಧಿತರಾಗಿದ್ದು ಇವರೆಲ್ಲರೂ ಆಂಧ್ರಪ್ರದೇಶ ಮೂಲದ ಮೀನುಗಾರರಾಗಿದ್ದಾರೆ.
(ಸಾಂದರ್ಭಿಕ ಚಿತ್ರ)
ಮೊಬೈಲ್ ಕಳವು ಮಾಡಿದ ಆರೋಪದಲ್ಲಿ ಆಂಧ್ರ ಪ್ರದೇಶ ಮೂಲದ ಮೀನುಗಾರ ವೈಲ ಸೀನು ಎಂಬ ವ್ಯಕ್ತಿಯನ್ನು, ಮೀನುಗಾರಿಕಾ ಬೋಟ್ ನಲ್ಲಿ ಮೀನುಗಾರ ಕಾರ್ಮಿಕರು ಬೋಟ್ ನ ಹುಕ್ಸ್ ಗೆ ಕಾಲನ್ನು ಕಟ್ಟಿ ತಲೆ ಕೆಳಗಾಗಿ ತೂಗು ಹಾಕಿ ಹಲ್ಲೆ ಮಾಡಿದ್ದರು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು ಮತ್ತು ವಿಡಿಯೋ ವೈರಲ್ ಆಗಿತ್ತು.
ಪಾಂಡೇಶ್ವರ ಪೊಲೀಸರು ಕೊಲೆಯತ್ನದ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
Comments are closed.