Mumbai

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗ | ನವರಾತ್ರಿ ಉತ್ಸವ- ಭಜನ್ ಜಾಮಿಂಗ್ ಮತ್ತು ಗರ್ಬಾ ಸಂಭ್ರಮ

Pinterest LinkedIn Tumblr

ಮುಂಬಯಿ: ಮಹಿಳಾ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರೇ ಸ್ವತಂತ್ರವಾಗಿ ನಿರ್ವಹಿಸುತ್ತಿರುವುದು ಮಹಿಳೆಯರ ಸಬಲೀಕರಣ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಬಂಟರ ಸಂಘ ಮುಂಬಯಿ, ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಅ. 18 ರಂದು  ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಹಾಗೂ ಸಮಿತಿಯ  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆಯವರ ನೇತೃತ್ವದಲ್ಲಿ ಕಾಂದಿವಲಿ ಪೂರ್ವದ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ನವರಾತ್ರಿ ಉತ್ಸವ ಭಜನ್ ಜಾಮಿಂಗ್ ಮತ್ತು ಗರ್ಬಾ ಸಂಭ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಅವರ ಸಂಘಟನಾ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳಿಗೆ ಸಾಕ್ಷಿಯಾಗಿದೆ. ಪ್ರಾದೇಶಿಕ ಸಮಿತಿಗಳಿಗೆ ತಮ್ಮದೇ ಆದ ನಿಯಮಾವಳಿಗಳಿದ್ದು ಅದನ್ನು ಅನುಸರಿಸಿದಲ್ಲಿ ಎಲ್ಲವೂ ಯಶಸ್ಸಿಯಾಗುವುದು ಎಂದು ಶುಭ ಹಾರೈಸಿದರು.

ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ,  ಎಲ್ಲರನ್ನು ಸ್ವಾಗತಿಸುತ್ತಾ ನವರಾತ್ರಿಯ ಈ ಶುಭದಿನದಂದು ನಮ್ಮ ಮಹಿಳೆಯರು ನವರಾತ್ರಿ ಹಾಗೂ ಗರ್ಬಾದಲ್ಲಿ ಬಾಗವಹಿಸುತ್ತಿರುವುದು ಅಭಿಮಾನ ತಂದಿದೆ ಎನ್ನುತ್ತಾ  ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸುತ್ತಿರುವ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ದಾನಿಗಳಿಗೂ ಅಬಾರಿ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಅವರು, “ನಮ್ಮ ದೇಶದಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯ ಹಾಗೂ ಹಿನ್ನೆಲೆಯಿದೆ. ನವರಾತ್ರಿಯು  ಶಕ್ತಿದೇವತೆಯಾದ ದುರ್ಗಾಮಾತೆಯ ಆರಾಧನೆಗೆ ಮೀಸಲಾಗಿದ್ದು, ಭಕ್ತಿ, ಶಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ದಸರಾ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದು ಸಾಧಿಸಿದ ವಿಜಯದ ಸಂಕೇತವಾಗಿದೆ”. ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ಮಹಿಳಾ ವಿಭಾಗದ ಕಾರ್ಯವನ್ನು ಶ್ಲಾಘಿಸಿ, ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯೆಯರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಮುಂದಿನ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಸ್ತಾಪಿಸಿದ ಅವರು, ಪ್ರಾದೇಶಿಕ ಸಮಿತಿಗೆ ಕಾರ್ಯಾಲಯ ಪಡೆಯಲು ಈಗಾಗಲೇ ಸ್ಥಳೀಯ ರಾಜಕೀಯ ಮುಖಂಡರಲ್ಲಿ ಮಾತನಾಡಿದ್ದು ಅದಕ್ಕೆ ಶಾಸಕರು ಮತ್ತು ನಗರ ಸೇವಕರು ಈಗಾಗಲೇ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ ಎಂದರು.

ಬೊರಿವಲಿ ಶಾಸಕರಾದ  ಸಂಜಯ್ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಬಂಟ ಸಮುದಾಯದವರೊಂದಿನ ನನ್ನ ನಂಟು ಮೊದಲಿನಿಂದಲೇ ಇದೆ. ಹೋಟೇಲು ಉದ್ಯಮದ ಮೂಲಕ ಇಡೀ ದೇಶದಲ್ಲೇ ಅನ್ನದಾತರಾಗಿರುವ ಈ ಸಮುದಾಯಕ್ಕೆ ದೇವರ ವರದಾನವಿದೆ. ಸನ್ಮಾನಕ್ಕೆ ಕೃತಜ್ನತೆ ಸಲ್ಲಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗೌರವ ಅತಿಥಿ ಚಾರ್ಕೋಪ್ ವಿಧಾನಸಭಾ ನಗರಸೇವಕಿ ಮನಿಷಾ ಯಾದವ್ ಅವರು ಮಾತನಾಡುತ್ತಾ ಪ್ಲಾಸ್ಟಿಕ್ ರಹಿತ ಹಾಗೂ ಡ್ರಗ್ ರಹಿತ ಮುಂಬಯಿ ಮಾಡಲಿದ್ದು ಎಲ್ಲರೂ ಇದಕ್ಕೆ ಸಹಕರಿಸಬೇಕು. ಇಲ್ಲಿನ ಮಹಿಳೆಯರ ಕಾರ್ಯವನ್ನು ನೋಡಿ ಪ್ರಭಾವಿತಳಾಗಿರುವೆನು ಎಂದರು.

ಇಕೋ-ಆರ್ಟಿಸ್ಟ್ ಮತ್ತು ಪ್ರಕೃತಿ ಪ್ರೇಮಿ ಸುಮತಿ ಶ್ರೀಧರ್ ಶೆಟ್ಟಿ  ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಇಂದು ಸನ್ಮಾನವನ್ನು ಸ್ವೀಕರಿಸಿ ನನ್ನ ಜನ್ಮ ಸಾರ್ಥಕವಾಗಿದೆ.  ಪ್ರಕೃತಿ ಪ್ರೇಮಿ ಯ ಬಗ್ಗೆ ಎಳೆಯದರಲ್ಲೇ ನನಗೆ ಆಸಕ್ತಿ ಇದ್ದು ಅದನ್ನು ಮುಂದುವರಿಸುತ್ತಿರುವೆನು ಎಂದರು.

ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರೂ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಮಹೇಶ್ ಎಸ್ ಶೆಟ್ಟಿ ಯವರು ಮಾತನಾಡುತ್ತಾ ಬಂಟರ ಸಂಘದ ಮಹಿಳೆಯರೆಲ್ಲರೂ ಪ್ರಭಲರಾಗಿದ್ದು ಈ ಪರಿಸರದ ಮಹಿಳೆಯರು ಪ್ರಭಲರು ಮಾತ್ರವಲ್ಲದೆ ಇವರಲ್ಲಿ ವಿಶೇಷತೆಯಿದೆ. ಬೊರಿವಲಿ ಶಿಕ್ಷಣ ಸಂಸ್ಥೆಯಿಂದ ಅನೇಕರಿಗೆ ಪ್ರಯೋಜನವಾಗಿದ್ದು ಅದು ಮಹಾನಗರದಲ್ಲಿ ಪ್ರಥಮ ಸ್ಥಾನ ಗಳಿಸುದರಲ್ಲಿ ಸಂದೇಹವಿಲ್ಲ ಎಂದರು.

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಶೆಟ್ಟಿಯವರು ಮಾತನಾಡುತ್ತಾ ಇಲ್ಲಿನ ಮಹಿಳೆಯರ ಉತ್ಸಾಹ ನಿಜಕ್ಕೂ ಅಭಿನಂದನೀಯ. ಇದೇ ರೀತಿ ಪುರುಷರ ಮಾರ್ಗದರ್ಶನದೊಂದಿಗೆ ಮಹಿಳೆಯರು ಸ್ವತ್ರಂತ್ರವಾಗಿ ಕಾರ್ಯಕ್ರಮವನ್ನು ನಡೆಸುವಂತಾಗಲಿ. ಬಂಟರ ಸಂಘ ಮುಂಬಯಿ, ಜೋಗೇಶ್ವರಿ–ದಹಿಸರ್ ಪ್ರಾದೇಶಿಕ ಸಮಿತಿಯ ಎಲ್ಲಾ ಮಹಿಳೆಯರಿಗೂ ಅಭಿನಂದನೆ ಸಲ್ಲಿಸುತ್ತಾ ಶುಭ ಹಾರೈಸಿದರು.

ಅವೆನ್ಯೂ ಹೋಟೇಲಿನ ರಘುರಾಮ ಶೆಟ್ಟಿ ಮತ್ತು ಭವಾನಿ ರಘುರಾಮ ಶೆಟ್ಟಿ ಇವರನ್ನು ಗೌರವಿಸಲಾಯಿತು.

 ಸಮಿತಿಯ ಮುಖ್ಯ ಸಲಹೆಗಾರರಾದ ಮುಂಡಪ್ಪ ಪಯ್ಯಾಡೆಯವರು ಮಾತನಾಡುತ್ತಾ ನೂರು ವರ್ಷದ ಹಿಂದೆ ನಮ್ಮ ಹಿರಿಯರು ನಿರ್ಮಿಸಿದ ಬಂಟರ ಸಂಘ ಮುಂಬಯಿಯಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ಹಕ್ಕು ಇದೆ. ಬೊರಿವಲಿ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಮಕ್ಕಳು ಕಲಿಯುತ್ತಿರುವುದುಅಭಿನಂದನೀಯ. ನೂರು ವರ್ಷಗಳಿಂದ ನಡೆದು ಕೊಂಡು ಬಂದಂತೆ ಮುಂದೆಯೂ ಸಂಘ ನಡೆಯಲಿ, ನಮಗೆಲ್ಲರಿಗೆ ದುರ್ಗಾಮಾತೆಯ ಆಶೀರ್ವಾದವಿರಲಿ ಎಂದರು.

ಈ ಸಂದರ್ಭದಲ್ಲಿ ಅರ್ಹ ಸಮಾಜ ಬಾಂದವರಿಬ್ಬರಿಗೆ ಸಮಿತಿಯ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಚೆಂಡೆ ಮೇಳದೊಂದಿಗೆ ಶ್ರೀ ದೇವಿಯ ರಥ ಯಾತ್ರೆ ನೆರವೇರಲ್ಪಟ್ಟು ಆರತಿಯನ್ನು ಬೆಳಗಲಾಯಿತು. ಭಜನ್ ಜಾಮಿಂಗ್ ಸೆಷನ್ ನಂತರ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ  ನೆರದ ಎಲ್ಲಾ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,  ಶ್ರೀ ದೇವಿಯ ಪ್ರಸಾದ ಹಾಗೂ ಪ್ರಸಾದ ಭೋಜನವನ್ನು ಸ್ವೀಕರಿಸಿದರು.

ಬೊರಿವಲಿ ನಗರ ಸೇವಕ ಶಿವಾನಂದ ಶೆಟ್ಟಿ,   ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ  ಸಂಚಾಲಕಿ ಶೈಲಜಾ ಎ. ಶೆಟ್ಟಿ,  ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಡಾ. ಪಿ. ವಿ. ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಸತೀಷ್ ಶೆಟ್ಟಿ, ಕಿಶೋರ್ ಶೆಟ್ಟಿ ಕುತ್ಯಾರ್, ಪ್ರಭಾವತಿ ಶೆಟ್ಟಿ, ಉದಯ ಶೆಟ್ಟಿ ಮೀರಾರೋಡ್, ಭಾಸ್ಕರ ಶೆಟ್ಟಿ ಕಾಶೀಮೀರ, ಅಂಧೇರಿ ಬಾಂದ್ರಾ  ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ ಹಾಗೂ ಹೋಟೇಲು ಉದ್ಯಮಿಗಳು ಮತ್ತು ದಾನಿಗಳು ಉಪಸ್ಥಿತರಿದ್ದರು.

 ಪ್ರಭಾವತಿ ಹರೀಶ್ ಶೆಟ್ಟಿ ಮತ್ತು ಡಾ. ಹರಿಣಿ ಚೌಟ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಾದೇಶಿಕ ಸಮಿತಿಯ  ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ,  ರೋಹಿತ್ ಶೆಟ್ಟಿ ಅಹುರಾ, ಮಹಿಳಾ ವಿಭಾಗದ ಸಾಹೆಗಾರರಾದ ಚಂದ್ರಿಕಾ ಶೆಟ್ಟಿ, ಪದ್ಮಾವತಿ ಬಿ ಶೆಟ್ಟಿ, ವಿನೋದಾ ಡಿ. ಶೆಟ್ಟಿ ಮತ್ತು ವಿನೋದಾ ಎ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಪ್ರಮುಖರಾದ ಗೀತಾ ಶೆಟ್ಟಿ, ಸ್ಮಿತಾ ಶೆಟ್ಟಿ ಸಲಹೆಗಾರರಾದ ಮನೋಹರ ಎನ್ ಶೆಟ್ಟಿ, ವಿಜಯ ಆರ್ ಭಂಡಾರಿ,  ನಿತ್ಯಾನಂದ ಹೆಗ್ಡೆ, ರವೀಂದ್ರ. ಎಸ್. ಶೆಟ್ಟಿ, ಮನೋಹರ. ಎನ್, ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ, ಸಲಹಾ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ಸಹಕರಿಸಿದರು.

 

Comments are closed.