ಆರೋಗ್ಯ

ಚಿಕ್ಕಮಗಳೂರು ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟ: 70 ಮಂದಿಗೆ ಸೋಂಕು, ಸೀಲ್ ಡೌನ್

Pinterest LinkedIn Tumblr
ಚಿಕ್ಕಮಗಳೂರು: ಚಿಕ್ಕಮಗಳೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸುಮಾರು 70 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎನ್.ಆರ್ ಪುರ ತಾಲೂಕಿನ ನವೋದಯ ವಿದ್ಯಾಲಯದಲ್ಲಿ ಸೋಂಕು ಕಾಣಿಸಿಕೊಂಡು ಕ್ಲಸ್ಟರ್ ಆಗಿದೆ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ಯಾಲಯದ ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಕಂಡುಬಂದಿದ್ದು ಪೋಷಕರಲ್ಲಿ, ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ತಂದಿದೆ. ಕ್ಲಸ್ಪರ್ ನ್ನಾಗಿ ಆರೋಗ್ಯ ಇಲಾಖೆ ಪರಿವರ್ತಿಸಿ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರುವ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಹಾಗು ನಾಲ್ವರು ಸಿಬ್ಬಂದಿಯಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ, 418 ವಿದ್ಯಾರ್ಥಿಗಳು, ಸಿಬ್ಬಂದಿಯ ಮಾದರಿಯನ್ನು ಆರೋಗ್ಯ ಇಲಾಖೆ ಪಡೆದಿತ್ತು. ಆ ಪೈಕಿ ಈವರೆಗೆ 70 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಸದ್ಯ ಈಗ ಜವಾಹರ್ ನವೋದಯ ವಿದ್ಯಾಲಯ ಸೀಲ್‌ಡೌನ್ ಮಾಡಲಾಗಿದೆ.

Comments are closed.