ಕರಾವಳಿ

ಮೃತ ಹಸುಗಳನ್ನು ವಾಹನಕ್ಕೆ ಕಟ್ಟಿ ನಿಷ್ಕರುಣಿಗಳಂತೆ ಹೆದ್ದಾರಿಯಲ್ಲಿ ಎಳೆದೊಯ್ದ ಐ.ಆರ್.ಬಿ ಟೋಯಿಂಗ್ ಸಿಬ್ಬಂದಿಗಳು..! (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಟೋಲ್ 1033 ಸಿಬ್ಬಂದಿಗಳು ಅಪಘಾತದಿಂದ ಮೃತಪಟ್ಟ ಗೋವುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ದರದರನೆ ಹೆದ್ದಾರಿಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ನಡೆದಿದೆ. ಸದ್ಯ ಜಾನುವಾರುಗಳ ಕಳೇಬರವನ್ನು ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿರೂರು ಟೋಲ್ ಫ್ಲಾಜಾದಿಂದ ಎರಡು‌ ಮೃತ ಜಾನುವಾರುಗಳ ಕಳೆಬರವನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ 2-3 ಕಿ.ಮೀ ದೂರ ರಸ್ತೆಯಲ್ಲಿ ಎಳೆದು ತರಲಾಗಿದೆ. ಕಾರಲ್ಲಿ ತೆರಳುವ ವ್ಯಕ್ತಿ ಈ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಹಿಂದೂಜಾಗರಣ ವೇದಿಕೆ, ಭಜರಂಗದಳ, ವಿಶ್ವಹಿಂದೂ ಪರಿಷತ್ ಸಹಿತ ಹಿಂದೂಪರ ಸಂಘಟನೆಗಳು ಈ‌ ಕುಕೃತ್ಯವನ್ನು ಖಂಡಿಸಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ನಾಳೆ ಪ್ರತಿಭಟನೆ….
ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಬಹುತೇಕ ಅವೈಜ್ಞಾನಿಕ ಕಾಮಗಾರಿ ನಡೆಸಿದೆ. ಇದರಿಂದ ರಸ್ತೆ ಅಪಘಾತಗಳು ನಡೆಯುತ್ತಿದ್ದು ಜನರು ಹಾಗೂ ಜಾನುವಾರುಗಳು ಬಲಿಯಾಗುತ್ತಲೇ ಇದೆ. ಕಂಪೆನಿಯ ಟೋಯಿಂಗ್ ಸಿಬ್ಬಂದಿಗಳ ಬೇಜವಾಬ್ದಾರಿತನದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಿಂದೂ ಸಂಘಟನೆ ನಾಳೆ (ಡಿ.6 ಸೋಮವಾರ) ಬೆಳಿಗ್ಗೆ 10 ಘಂಟೆಗೆ ಪ್ರತಿಭಟನೆಗೆ ಕರೆನೀಡಲಾಗಿದೆ ಎಂದು ಬೈಂದೂರು ತಾಲೂಕು ಭಜರಂಗದಳ ಸಂಚಾಲಕ ಸುಧಾಕರ ಶೆಟ್ಟಿ ನೆಲ್ಯಾಡಿ, ಬಿಜೆಪಿ ಗೋ ಪ್ರಕೋಷ್ಠ ಸಂಚಾಲಕ ಸಂತೋಷ್ ಪೂಜಾರಿ ಜೆ.ಡಿ ಬೈಂದೂರು ತಿಳಿಸಿದ್ದಾರೆ.

Comments are closed.