ಆರೋಗ್ಯ

ದೇಹವನ್ನು ಚೈತನ್ಯದಿಂದ ಮತ್ತು ಯೌವನಯುತವಾಗಿ ಇರಿಸಲು ಇದು ಸಹಾಯಕ

Pinterest LinkedIn Tumblr

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಸೇರಿಸಿಕೊಂಡು ತಿಂದರೇ ಇದರಿಂದ ನೀವು ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂದ ಹಾಗೇ ಈ ಹಣ್ಣನ್ನು ಸಾಮಾನ್ಯವಾಗಿ ರೋಸ್ಟ್ ಮತ್ತು ಪಲ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ, ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚು ನಾವುಗಳು ಪಡೆದುಕೊಳ್ಳಲು ಇದನ್ನು ಹಸಿಯಾಗಿಯೇ ತಿನ್ನುವುದು ಉತ್ತಮವಾಗಿದೆ.

ಔಷಧೀಯ ಗುಣಗಳಿರುವ ಈ ಹಣ್ಣಿಗೆ ಪ್ರಾಚೀನ ಕಾಲದಿಂದಲೂ ಕೂಡ ಇದು ಮಹತ್ವವನ್ನು ಪಡೆದುಕೊಂಡಿದೆ. ವಿಪರ್ಯಾಸವೆಂದರೆ, ಇತಿಹಾಸದ ಹಾದಿಯಲ್ಲಿ ಇದು ನ್ಯೂಜಿಲೆಂಡ್ ನ ರಾಷ್ಟ್ರೀಯ ಹಣ್ಣು ಎಂದು ಗುರುತಿಸಲಾಗಿದೆ.ಕಿವಿ ಹಣನ್ನು ಒಂದು ಸಾಮಾನ್ಯ ಹಣ್ಣು ಅಲ್ಲವೇ ಅಲ್ಲ. ಇದರ ಪ್ರಯೋಜನ ನೂರಾರು ಇದ್ದು, ಇದರಿಂದ ನಾವು ಅನೇಕ ರೀತಿಯಲ್ಲಿ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಂದ ಹಾಗೇ ಈ ಹಣ್ಣನ್ನು ಚೀನೀ ಮೂಲದ್ದು ಅಂತ ಹೇಳಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಅಗ್ಟೀಸ್ಟ್ (USDA) ಪ್ರಕಾರ, 100 ಗ್ರಾಂ ಕಿವೀಹಣ್ಣಿನಲ್ಲಿ 61 ಕ್ಯಾಲೋರಿಗಳು, 14.66 ಗ್ರಾಂ ಕಾರ್ಬೋಹೈಡ್ರೇಟ್, 1.14 ಗ್ರಾಂ ಪ್ರೋಟೀನ್, 0.52 ಗ್ರಾಂ ಕೊಬ್ಬು ಮತ್ತು 3 ಗ್ರಾಂ ನಾರಿನಂಶವಿದೆ ಅಂತ ತಿಳಿಸಿದೆ. ಇಂತಹ ಕಿವಿಹಣ್ಣು ತನ್ನ ಅದ್ಭುತ ನೋಟ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹೊಳೆಯುವ ಕಂದು ಬಣ್ಣದ ಹೊರಮೈ, ಹೊಳೆಯುವ ಹಸಿರು ಬಣ್ಣದ ಸಿಪ್ಪೆಯೊಂದಿಗೆ ಇರುವ ಈ ಕಿವಿ ಹಣ್ಣು ರಸಭರಿತವಾಗಿದ್ದು, ಸಿಹಿ ಮತ್ತು ರುಚಿಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಕೂಡ.

ಕಿವಿ ಹಣ್ಣಿನ ಪೌಷ್ಟಿಕಾಂಶದ ಪ್ರಯೋಜನಗಳು
ಸೇಬು ಹಣ್ಣನ್ನು ನಾವು ಪವಾಡ ಫಲವೆಂದು ಪರಿಗಣಿಸುತ್ತೇವೆ, ಆದರೆ ಕಿವಿ ಹಣ್ಣಲ್ಲೂ ಕೂಡ ಸಹ ಅಗತ್ಯ ವಿಟಮಿನ್ ಗಳು ಮತ್ತು ಖನಿಜಗಳಿಂದ ತುಂಬಿದೆ ಮತ್ತು ನಿಮಗೆ ಪೌಷ್ಟಿಕಾಂಶದ ಉತ್ತೇಜನವನ್ನು ನೀಡಲು ಹಲವಾರು ರೀತಿಯಲ್ಲಿ ಈ ಹಣ್ಣು ಕೆಲಸ ಮಾಡುತ್ತದೆ.

ಕಿವಿಹಣ್ಣಿನ ಕೆಲವು ಪ್ರಯೋಜನಗಳು ಇಲ್ಲಿವೆ:

1. ವಿಟಮಿನ್ ಸಿ ಯನ್ನು ಒಳಗೊಂಡಿದೆ
ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣು ಸಿ ಜೀವಸತ್ವದ ಅತ್ಯುನ್ನತ ಮೂಲಎಂದು ನೀವು ಭಾವಿಸಿದ್ದರೆ, ಈಗ ನಾವು ನಿಮಗೆ ಹೇಳ್ತಾ ಇರೋ ಇನ್ನೊಂದು ಮಾಹಿತಿಯನ್ನು ಗಮನವಿಟ್ಟು ಓದಿ. ಕಿವಿ ಹಣ್ಣಿನ ಪೌಷ್ಟಿಕಾಂಶದ ವಿಭಜನೆಯ ಪ್ರಕಾರ, ಪ್ರತಿ 100 ಗ್ರಾಂಗಳಲ್ಲಿ ಸಿ ಜೀವಸತ್ವದ 154 ಪ್ರತಿಶತದಷ್ಟು ಇರುತ್ತದೆ ಎನ್ನಲಾಗಿದ್ದು, ಇದರಲ್ಲಿ ಇದು ನಿಂಬೆ ಮತ್ತು ಕಿತ್ತಳೆಹಣ್ಣುಗಳ ಎರಡರಷ್ಟು ಇರುತ್ತದೆಯಂತೆ. ವಿಟಮಿನ್ ಸಿ ಪ್ರಬಲ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಉರಿಯೂತ ಅಥವಾ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್ಯಾಡಿಕಲ್ ಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಹಾನಿಕಾರಕ ರೋಗಕಾರಕಗಳ ವಿರುದ್ಧ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

2. ನಿದ್ದೆ ಬಾರದ ರಾತ್ರಿಗೆ ಗುಡ್‌ ಬೈ ಹೇಳಿ
ನಿದ್ದೆ ಮಾಡಲು ತೊಂದರೆ ಇದೆಯೇ? ತೈಪೆ ವೈದ್ಯಕೀಯ ವಿಶ್ವವಿದ್ಯಾಲಯನಡೆಸಿದ ಸಂಶೋಧನೆಯ ಪ್ರಕಾರ, ಕಿವೀ ಹಣ್ಣಿನಲ್ಲಿ ಹಲವಾರು ಔಷಧೀಯ ವಾಗಿ ಉಪಯುಕ್ತಸಂಯುಕ್ತಗಳಿವೆ, ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಸಿರೊಟೋನಿನ್ ಗಳು ನಿದ್ರೆಯ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿವೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. ಮಲಗುವ ಒಂದು ಗಂಟೆ ಮೊದಲು ಎರಡು ಕಿವೀ ಹಣ್ಣುಗಳನ್ನು ಸೇವಿಸಿದರೆ ನಿದ್ರೆಗೆ ಪ್ರೇರೇಪಿಸುತ್ತದೆ ಎಂದು ಹೇಳಲಾಗುತ್ತದೆ.

3. ಫೈಬರ್ ನ ಉತ್ತಮ ಮೂಲ
ಈ ಹಣ್ಣು ಡಯಟರಿ ಫೈಬರ್ ನಿಂದ ಕೂಡಿರುತ್ತದೆ, ಇದು ಹಲವಾರು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ‘ಫೈಬರ್ ಯುಕ್ತ ಆಹಾರಗಳ ಸೇವನೆಯನ್ನು ಹೆಚ್ಚಿಸುವುದು ಹೃದ್ರೋಗ (CVD) ಮತ್ತು ಪರಿಧಮನಿ ಹೃದ್ರೋಗ (CHD) ಎರಡರ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದು ಯೂನಿವರ್ಸಿಟಿ ಆಫ್ ಲೀಡಸ್ ನಡೆಸಿದ ಅಧ್ಯಯನತಿಳಿಸಿದೆ. ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ಮೆಡಿಕಲ್ ಸ್ಕೂಲ್ ನ ಸಂಶೋಧಕರ ಪ್ರಕಾರ, ಅಧಿಕ ನಾರಿನಂಶವಿರುವ ಆಹಾರಗಳು ಹೆಚ್ಚು ಕಾಲ ಹೊಟ್ಟೆ ತುಂಬುತ್ತವೆ ಮತ್ತು ಚಯಾಪಚಯ ಚಿಹ್ನೆಗಳಾದ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತವೆ. ಇದು ತೂಕ ಇಳಿಕೆಗೂ ಅನುಕೂಲ ಮಾಡಿಸುತ್ತದೆ ಮತ್ತು ಮಧುಮೇಹಿಗಳಿಗೆ ಇದು ಅನೇಕ ವೇಳೆ ಶಿಫಾರಸು ಮಾಡುತ್ತದೆ.

4.ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಕಿವೀ ಹಣ್ಣಿನಲ್ಲಿ ಕಿವೀಹಣ್ಣು ಆಕ್ಟಿನಿಡೈನ್ ಎಂಬ ಕಿಣ್ವವನ್ನು ಹೊಂದಿದ್ದು, ಇದು ಪಪ್ಪಾಯಿಯಲ್ಲಿರುವ ಪಪೈನ್ ನಂತೆಯೇ ಪ್ರೋಟೀನ್ ಕರಗುವ ಗುಣಹೊಂದಿದೆ. ಅಲ್ಲದೆ, ದೇಹದಲ್ಲಿ ಪ್ರೋಟೀನ್ ಗಳ ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತದೆ ಮತ್ತು ಕಿರಿಕಿರಿಕರುಳಿನ ಸಿಂಡ್ರೋಮ್ ನಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುತ್ತದೆಯಂತೆ.

5. ಇದು ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ, ಏಕೆಂದರೆ ಇದು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಇದು ಆರೋಗ್ಯಕರವಾಗಿಸುತ್ತದೆ. ಬೆಳೆಯುವ ಮಕ್ಕಳಿಗೆ ಇದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

6. ವಿಟಮಿನ್ ಗಳು ಮತ್ತು ಖನಿಜಗಳನ್ನು ಹೊಂದಿದೆ
ಕಿವೀ ಹಣ್ಣಿನಲ್ಲಿ ವಿಟಮಿನ್ ಗಳು ಮತ್ತು ಖನಿಜಗಳಾದ ವಿಟಮಿನ್ ಎ, ಬಿ6, ಬಿ12, ಇ ಮತ್ತು ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಶಿಯಂ ಗಳು ತುಂಬಿರುತ್ತದೆ. ಇವು ರಕ್ತನಾಳಗಳ ಮೂಲಕ ರಕ್ತಪರಿಚಲನೆ, ಒತ್ತಡವಿರುದ್ಧ ಹೋರಾಡುವುದು, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಕಬ್ಬಿಣವನ್ನು ಹೀರಿಕೊಳ್ಳುವಿಕೆ, ಉತ್ತಮ ದೃಷ್ಟಿ, ಇತ್ಯಾದಿಗಳ ಮೂಲಕ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತವೆ. ಪೊಟ್ಯಾಶಿಯಂ, ಪ್ರತಿ 100 ಗ್ರಾಂಗೆ 312 ಮಿ.ಗ್ರಾಂ., ರಕ್ತದೊತ್ತಡ ವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ, ಮೆಗ್ನೀಷಿಯಂ ನರ ಮತ್ತು ಸ್ನಾಯುಗಳ ಕಾರ್ಯಚಟುವಟಿಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

7. ಸುಂದರ ತ್ವಚೆ
ಕಿವೀಯು ಪ್ರಕೃತಿಯಲ್ಲಿ ಕ್ಷಾರೀಯವಾಗಿದೆ, ಅಂದರೆ ನಾವು ಹೆಚ್ಚಾಗಿ ಸೇವಿಸುವ ಆಮ್ಲೀಯ ಆಹಾರಗಳ ಪರಿಣಾಮಗಳನ್ನು ಎದುರಿಸಲು ಇದು ಸಹಾಯ ಮಾಡುತ್ತದೆ. ಆರೋಗ್ಯಕರ ಶರೀರವು ಉತ್ತಮ pH ಸಮತೋಲನವನ್ನು ಹೊಂದಿದ್ದು, ಇದು ನಿಮ್ಮನ್ನು ಕ್ರಿಯಾಶೀಲವಾಗಿ, ಚೈತನ್ಯದಿಂದ ಮತ್ತು ಯೌವನಯುತ ತ್ವಚೆಯೊಂದಿಗೆ ಇರಿಸಲು ಸಹಾಯ ಮಾಡುತ್ತದೆ. ಕೀವಿಯಲ್ಲಿ (C ಮತ್ತು E) ವಿಟಮಿನ್ ಗಳು ಚರ್ಮಕ್ಕೆ ಉತ್ತಮವಾಗಿವೆ ಎಂದು ಹೇಳಲಾಗುತ್ತದೆ ಏಕೆಂದರೆ ಅವು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ, ಇದು ಚರ್ಮವು ಅವನತಿಯನ್ನು ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಕೆಲವು ತುಂಡುಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ

Comments are closed.