ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ನೂತನ ವ್ಯವಸ್ಥಾಪನ ಮಂಡಳಿ ಸದಸ್ಯರ ಆಯ್ಕೆ

Pinterest LinkedIn Tumblr
ಕುಂದಾಪುರ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು 158 ಅರ್ಜಿಗಳು ಬಂದಿದ್ದು ಅದರಲ್ಲಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿದೆ.
ವ್ಯವಸ್ಥಾಪನ ಸಮಿತಿಗೆ ಆಯ್ಕೆ ಮಾಡಲಾದ ಸದಸ್ಯರ ಹೆಸರು ವಿವರ ಹೀಗಿದೆ: ಪಾಳಿಯಲ್ಲಿರುವ ಪ್ರಧಾನ ಅರ್ಚಕರಾದ ಕೊಲ್ಲೂರು ಬಾಳೆಗದ್ದೆ ಮನೆ ಡಾ. ಕೆ. ರಾಮಚಂದ್ರ ಅಡಿಗ, ಮಹಿಳಾ ಮೀಸಲಾತಿಯಲ್ಲಿ ರತ್ನಾ ರಮೇಶ್‌ ಕುಂದರ್‌ ಕೊಲ್ಲೂರು, ಸಂಧ್ಯಾ ರಮೇಶ್‌ ಮಚ್ಚಟ್ಟು, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಗೋಪಾಲಕೃಷ್ಣ ರಾಮನಗರ ಸೇನಾಪುರ, ಸಾಮಾನ್ಯ ವರ್ಗದಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್‌ ಕಿಣಿ ಬೆಳ್ವೆ, ಡಾ.ಅತುಲ್‌ಕುಮಾರ ಶೆಟ್ಟಿ ಚಿತ್ತೂರು, ಜಯಾನಂದ ಹೋಬಳಿದಾರ ಬೈಂದೂರು ಹಾಗೂ ಶೇಖರ ಪೂಜಾರಿ ಕಾರ್ಕಡ.

(ಸಂಗ್ರಹ ಚಿತ್ರಗಳು)
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮೂರು ವರ್ಷಗಳ ಅವಧಿಯದ್ದಾಗಿದೆ. ಈ ಬಾರಿ 158 ಅರ್ಜಿಗಳು ಬಂದಿತ್ತು. ಅರ್ಜಿದಾರರ ಅರ್ಹತೆ, ಅನರ್ಹತೆ, ವಿಳಾಸ ಹಾಗೂ ಪೂರ್ವಾಪರ ವಿವರ ಮೊದಲಾದವುಗಳನ್ನು ಪರಿಶೀಲಿಸಿ ದೇವಸ್ಥಾನದ ಸುವ್ಯವಸ್ಥಿತ ಆಡಳಿತದ ಹಿತದ್ರಷ್ಟಿಯಿಂದ ವಿವಿಧ ವರದಿಗಳನ್ನು ಪರಿಶೀಲಿಸಿ ನೂತನ ಸಮಿತಿ ಸದಸ್ಯರ ಆಯ್ಕೆ ಮಾಡಲಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ. ನೂತನ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿಯೇ ಒಬ್ಬರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಕಳಿಸಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)

Comments are closed.