ಆರೋಗ್ಯ

ಸಾಮಾನ್ಯ ತೂಕಕ್ಕಿಂತ ಹೆಚ್ಚಿನ ತೂಕ ಇರುವವರು ಈ ಹಣ್ಣು ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯಕಾರಿ

Pinterest LinkedIn Tumblr

ನಾವು ಕೇವಲ ಎರಡು ವಾರಗಳ ಕಾಲ ದಾಲಿಂಬೆಯನ್ನು ತಿನ್ನುವುದರಿಂದ ಇದರಿಂದ ನಮಗೆ ಉಂಟಾಗುವ ಪ್ರಯೋಜನಗಳು ಹಲವಾರು. ದಾಳಿಂಬೆಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ವಿಟಮಿನ್ ಏ, ವಿಟಮಿನ್ ಸಿ ಅಂಶಗಳು ಹಾಗೂ ಪಾಲಿಕ್ ಆಸಿಡ್ ಗುಣಗಳು ಹೇರಳವಾಗಿರುವ ದಾಳಿಂಬೆ ಹಣ್ಣಿನ ಸೇವನೆ ಮಾಡುವುದು ನಮ್ಮ ದೇಹಕ್ಕೆ ತುಂಬಾ ಲಾಭದಾಯಕ. ಎಕೆಂದರೆ ದಾಳಿಂಬೆಹಣ್ಣು ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ಸೌಂದರ್ಯಕ್ಕೆ ಕೂಡಾ ತುಂಬಾ ಒಳ್ಳೆಯದು. ಒಂದು ದಾಳಿಂಬೆ ಹಣ್ಣು ನೂರು ರೋಗಗಳಿಗೆ ಔಷಧಿಯಾಗಿದೆ ಎನ್ನುವ ಹಿರಿಯರ ಮಾತು ನಿಜವಾಗಿದೆ.

ಪ್ರತೀ ದಿನ ಒಂದು ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಅಥವಾ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಈ ರೀತಿಯ ಲಾಭಗಳನ್ನು ನಾವು ಪಡೆಯಬಹುದು. ಸಾಮಾನ್ಯ ತೂಕಕ್ಕಿಂತ ಹೆಚ್ಚಿನ ತೂಕ ಇರುವವರು ದಾಳಿಂಬೆಯನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಇದು ತುಂಬಾನೇ ಸಹಾಯಕಾರಿಯಾಗಿದೆ. ಹೆಚ್ಚು ಬೊಜ್ಜು ಇರುವವರೂ ಸಹ ದಾಳಿಂಬೆ ಸೇವನೆಯಿಂದ ಬೊಜ್ಜನ್ನು ಕರಗಿಸಬಹುದು. ಮಧುಮೇಹ ಇರುವವರು ಸಹ ದಾಳಿಂಬೆಯನ್ನು ಸೇವಿಸಬಹುದು. ಇದರಲ್ಲಿ ಪ್ಲೂಟೋನ್ ಅಂಶ ಇರುವ ಕಾರಣ ಸಿಹಿಯಾಗಿದ್ದರೂ ಕೂಡಾ ದೇಹದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುವುದಿಲ್ಲ.

ಪ್ರತೀ ದಿನ ದಾಳಿಂಬೆ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯರಿಗೆ ಕೂಡಾ ದಾಳಿಂಬೆ ಹಣ್ಣು ತುಂಬಾನೇ ಲಾಭದಾಯಕ ಏಕೆಂದರೆ ಇದರಲ್ಲಿರುವ ವಿಟಮಿನ್ ಗಳು, ಮಿನರಲ್ ಗಳು ಹಾಗೂ ಪಾಲಿಕ್ ಆಸಿಡ್ ಗಳು ಹುಟ್ಟುವ ಮಗುವಿನ ಬೆಳವಣಿಗೆಗೆ ಸಹಾಯಕ. ಈ ಮೂಲಕ ಮಗುವಿನ ರಕ್ಷಣೆ ಕೂಡಾ ಮಾಡುತ್ತದೆ. ಹೃದಯ ಸಂಬಂಧಿತ ರೋಗಿಗಳು ದಾಲಿಂಬೆಯನ್ನು ತಿನ್ನಲೇಬೇಕು. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವುದು ಅಷ್ಟೇ ಅಲ್ಲದೆ ಹೃದಯಾಘಾತ ಕೂಡಾ ಆಗುವುದಿಲ್ಲ ಹಾಗೇ ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತವನ್ನು ಶುದ್ಧೀಕರಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರೆ ದಾಳಿಂಬೆಯನ್ನೂ ತಿನ್ನುವುದು ಒಳ್ಳೆಯದು. ದಾಳಿಂಬೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕುವುದರಿಂದ ಇದು ಕ್ಯಾನ್ಸರ್ ರೋಗಕ್ಕೆ ರಾಮಬಾಣ ಎನ್ನಬಹುದು.

Comments are closed.