ಕರಾವಳಿ

ಬೈಂದೂರು ಶಿರೂರಿನ ಸಮುದ್ರ ತೀರದಲ್ಲಿ ಪತ್ತೆಯಾದ ಕ್ಷಿಪಣಿ ಮಾದರಿ ವಸ್ತುವಾದರು ಏನು?

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ವಿಚಿತ್ರ ವಸ್ತುವೊಂದು ಪತ್ತೆಯಾಗುವ ಮೂಲಕ ಸ್ಥಳೀಯರನ್ನು ಹಾಗೂ ಮೀನುಗಾರರನ್ನು ಕುತೂಹಲಕ್ಕೀಡು ಮಾಡಿದ ಘಟನೆ ನಡೆದಿದೆ.

ಕೆಂಪು ಬಣ್ಣದಲ್ಲಿದ್ದ ಈ ವಸ್ತು ಮೇಲ್ನೋಟಕ್ಕೆ ಕ್ಷಿಪಣಿಯಂತೆ ಕಾಣುತ್ತಿದ್ದು ಸುಮಾರು 10 ಅಡಿ ಉದ್ದವಿತ್ತು. ಇದನ್ನು ನೋಡಿದ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

‘ಮೇಲ್ನೋಟಕ್ಕೆ ಹಡಗಿನ ದಿಕ್ಕು ಸೂಚಕ ವಸ್ತುವಿನಂತೆ ತೋರುತ್ತಿದ್ದು ಬಂದರಿನ ಸಮೀಪದಲ್ಲಿ ಇಂತಹ ಉಪಕರಣವನ್ನು ಅಳವಡಿಸಲಾಗುತ್ತದೆ. ಹಡಗುಗಳು ಬಂದರು ತಲುಪಲು ಈ ಉಪಕರಣಗಳು ಸಹಾಯ ಮಾಡುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.