ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ: 290 ಕೋಟಿಗೂ ಅಧಿಕ ನಷ್ಟ..!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ 290 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ನಡೆಸಿದ ಪ್ರಾಥಮಿಕ ಅಂದಾಜು ವೆಚ್ಚದಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ತುರ್ತು ಪರಿಹಾರ ಕಾಮಗಾರಿಗಳಿಗೆ 40 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಜಿಲ್ಲಾಡಳಿತ ಸರಕಾರಕ್ಕೆ ಪತ್ರ ಬರೆದಿದೆ. ಕೃಷಿ, ತೋಟಗಾರಿಕೆ, ಪಿಡಬ್ಲ್ಯುಡಿ, ಮೆಸ್ಕಾಂ ಮೊದಲಾದ ಇಲಾಖೆಗಳಿಂದ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಅಂತಿಮ ವರದಿ ಇನ್ನಷ್ಟೇ ಕೈಸೇರಬೇಕಿದೆ.

ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಜಿಲ್ಲೆಯ ಶಾಸಕರ ಒತ್ತಡದ ಮೇರೆಗೆ ಪರಿಹಾರ ಮೊತ್ತ ಬಿಡುಗಡೆಯಾಗುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಮಂಗಳವಾರ ಮಣಿಪಾಲದ ಪ್ರೀಮಿಯರ್‌ ಎನ್‌ಕ್ಲೇವ್‌ ರಕ್ಷಣ ಗೋಡೆ ಕುಸಿದಿರುವ ಪ್ರದೇಶಕ್ಕೆ ಭೇಟಿ ನೀಡಿದರು. ಪೆರಂಪಳ್ಳಿ ಭಾಗದಲ್ಲಿ ಜನರನ್ನು ರಕ್ಷಿಸಿದ ಮನೆಗಳಿಗೆ ಭೇಟಿ ನೀಡಿದರು. ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳ ಸುಪರ್ದಿಯಲ್ಲಿ ತಲಾ 1 ಕೋ.ರೂ. ಈಗಾಗಲೇ ಇದ್ದು, ಜಿಲ್ಲಾಧಿ ಕಾರಿಯವರು ಹೆಚ್ಚುವರಿ ಯಾಗಿ ತಲಾ 2 ಕೋಟಿ ತುರ್ತು ಪರಿಹಾರಕ್ಕಾಗಿ ಮಂಜೂರು ಮಾಡಿದ್ದಾರೆ.

 

Comments are closed.