ದೆಹಲಿ: ದೆಹಲಿ ಕೋಮು ಗಲಭೆಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಸಮನ್ಸ್ ವಿರುದ್ಧ ಉಪಾಧ್ಯಕ್ಷ ಅಜಿತ್ ಮೋಹನ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಕೈಗೆತ್ತಿಕೊಳ್ಳಲಿದೆ. .
ಗಲಭೆಗೆ ಸಾಮಾಜಿಕ ಜಾಲತಾಣದ ವೇದಿಕೆ ಸಹಭಾಗಿತ್ವ ನೀಡಿದ ಆರೋಪದ ಕುರಿತು ದೆಹಲಿ ವಿಧಾನಸಭೆ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಫೇಸ್ಬುಕ್ ಇಂಡಿಯಾ ಉಪಾಧ್ಯಕ್ಷರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಈ ಪ್ರಕರಣ ಈಗಾಗಲೇ ಸಂಸದೀಯ ಸಮಿತಿ ಮುಂದೆ ಇರುವುದರಿಂದ ದೆಹಲಿ ವಿಧಾನ ಸಭೆ ಮುಂದೆ ಹಾಜರಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಫೇಸ್ಬುಕ್ ಇಂಡಿಯಾ ಮುಖ್ಯಸ್ಥರು ಅರ್ಜಿ ಸಲ್ಲಿಸಿದ್ದಾರೆ.
ನಿಯಮವನ್ನು ಗಾಳಿಗೆ ತೂರಿ ಫೇಸ್ಬುಕ್ ದ್ವೇಷ ಭಾವನೆಗೆ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿದ ಆರೋಪದ ಮೇಲೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಹಲವು ಬಾರಿ ಸಮನ್ಸ್ ನೀಡಿದರೂ ಹಾಜರಾಗಲೂ ವಿಫಲರಾದ ಹಿನ್ನಲೆ ಭಾನುವಾರ ಸಮಿತಿ ಹೊಸ ಮತ್ತು ಅಂತಿಮಬಾರಿಗೆ ಸಮನ್ಸ್ ಜಾರಿ ಮಾಡಿತ್ತು.
Comments are closed.