
ನವದೆಹಲಿ: ಎಲ್ ಎಸಿ ಹತ್ತಿರ ಐದು ಹೆಲಿಪೋರ್ಟ್ ಗಳು, ಐದು ಶಾಶ್ವತ ವಾಯು ರಕ್ಷಣಾ ಸ್ಥಾನಗಳು, 3 ವಾಯುನೆಲೆಗೆಳು, 13 ಹೊಸ ಮಿಲಿಟರಿ ಸ್ಥಾನಗಳ ನಿರ್ಮಾಣ ಕಾರ್ಯವನ್ನು ಚೀನಾ ಆರಂಭಿಸಿದೆ ಎಂದು ಜಾಗತಿಕ ಭದ್ರತಾ ಕನ್ಸಲ್ ಟೆನ್ಸಿ ಸ್ಟಾರ್ಟ್ ಫಾರ್ ತಿಳಿಸಿದೆ.
ಪೂರ್ವ ಲಡಾಖ್ ನಲ್ಲಿ ಮೇ ತಿಂಗಳ ಆರಂಭದಲ್ಲಿ ಗಡಿ ವಿವಾದ ತಲೆದೋರಿದ ಬಳಿಕ ನಾಲ್ಕು ಹೊಸ ಹೆಲಿಪೋರ್ಟ್ ಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2017 ರ ಡೋಕ್ಲಾಮ್ ಬಿಕ್ಕಟ್ಟು ಚೀನಾದ ಕಾರ್ಯತಂತ್ರದ ಉದ್ದೇಶಗಳನ್ನು ಬದಲಿಸಿದಂತೆ ತೋರುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು ವಾಯುನೆಲೆಗಳು, ವಾಯು ರಕ್ಷಣಾ ಸ್ಥಾನಗಳು ಮತ್ತು ಹೆಲಿಪೋರ್ಟ್‌ಗಳನ್ನು ದ್ವಿಗುಣಗೊಳಿಸುತ್ತಿದೆ ಎಂದು ತಿಳಿಸಲಾಗಿದೆ.
ಭದ್ರತಾ ತಜ್ಞ ಸಿಮ್ ಟ್ಯಾಕ್ ಬರೆದಿರುವ ವರದಿ ಇಂದು ಬಿಡುಗಡೆಯಾಗಿದ್ದು, ಇತ್ತೀಚಿನ ವಿವಾದಗಳು ಉಭಯ ದೇಶಗಳ ನಡುವೆ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದ್ದಂತೆ ಕಾಣುತ್ತಿದ್ದು, ಚೀನಾದ ಈ ನಿರ್ಮಾಣ ಕಾರ್ಯವು ಭವಿಷ್ಯದ ಮಿಲಿಟರಿ ಸಾಮರ್ಥ್ಯವನ್ನು ಯೋಜಿಸಿದಂತೆ ಕಾಣುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Comments are closed.