
ಮೂಲಂಗಿ ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಅದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ
ಗರ್ಭಿಣಿಯರು ತಿಂಗಳಿಗೆ ಕನಿಷ್ಠ ಎಂದರೂ ಒಂದು ಅಥವಾ ಎರಡು ಮೂಲಂಗಿ ಮತ್ತು ಅದರ ಸೊಪ್ಪನ್ನು ತಿನ್ನುವುದು ಉತ್ತಮ. ಇದರಿಂದ ದೇಹದಲ್ಲಿ ಫೋಲಿಕ್ ಆಮ್ಲ ಪ್ರಮಾಣದಲ್ಲಿ ಏರಿಕೆಯಾಗುತ್ತದೆ
ಏಕೆಂದರೆ ಮೂಲಂಗಿಯಲ್ಲಿ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತದೆ. ಇದರಿಂದ ಗರ್ಭಿಣಿಯರ ಜೀರ್ಣಶಕ್ತಿ ಕೂಡ ಉತ್ತಮಗೊಳ್ಳುತ್ತದೆ. ಹಾಗೆಯೇ ಇದರಲ್ಲಿರುವ ಪೋಷಕಾಂಶಗಳು ಮಗುವಿನ ಬೆಳವಣಿಯನ್ನು ಉತ್ತೇಜಿಸುತ್ತದೆ.
100 ಗ್ರಾಂ ಮೂಲಂಗಿಯಲ್ಲಿರುವ ಪೋಷಕಾಂಶಗಳು
ಸಾರಜನಕ ೦.7 ಗ್ರಾಂ
ಪಿಷ್ಟ 3.4 ಗ್ರಾಂ
ಮೇದಸ್ಸು 0.1 ಗ್ರಾಂ
ಖನಿಜಾಂಶ 0.6 ಗ್ರಾಂ
ನಾರಿನಾಂಶ 0.8ಗ್ರಾಂ
ರಂಜಕ 22ಗ್ರಾಂ
ಸೋಡಿಯಂ 33 ಮಿಲಿಗ್ರಾಂ
ಪೊಟ್ಯಾಷಿಯಂ 138 ಮಿಲಿಗ್ರಾಂ
ರೈಬೋಫ್ಲೆವಿನ್ 0.02ಮಿಲಿಗ್ರಾಂ
ಆಕ್ಸಾಲಿಕ್ ಆಮ್ಲ 9 ಮಿಲಿಗ್ರಾಂ
ಎ ಜೀವಸತ್ವ 5 ಐ. ಯು.
ಸಿ ಜೀವಸತ್ವ 15 ಮಿಲಿಗ್ರಾಂ
ಸುಣ್ಣ 50 ಮಿಲಿಗ್ರಾಂ
ಕಬ್ಬಿಣ 0.4 ಮಿಲಿಗ್ರಾಂ
ಥಯಾಮಿನ್ 0.4 ಮಿಲಿಗ್ರಾಂ
ಮೂಲಂಗಿಯನ್ನು ದಿವ್ಯೌಷಧಿ ಗುಣಗಳ ತರಕಾರಿ ಎನ್ನಲಾಗುತ್ತದೆ. ಗರ್ಭಾವಸ್ಥೆ ಸಮಯದಲ್ಲಿ ಗರ್ಭಿಣಿಯರು ಮೂಲಂಗಿ ತಿನ್ನುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಹುಟ್ಟಲಿರುವ ಮಗುವಿನ ಆರೋಗ್ಯಕ್ಕೂ ಮೂಲಂಗಿ ಅತ್ಯುತ್ತಮ ಆಹಾರ.
ಮೂಲಂಗಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ ಮತ್ತು ಇನ್ನಿತರ ಖನಿಜಾಂಶಗಳಿರುತ್ತವೆ. ಗರ್ಭಿಣಿಯರು ಇದನ್ನು ತಿನ್ನುವುದರಿಂದ ಮಗುವಿಗೆ ಜಾಂಡೀಸ್ ಅಥವಾ ಕಾಮಾಲೆ ಕಾಯಿಲೆ ಬರದಂತೆ ತಡೆಯಬಹುದು.
ಇನ್ನೂ ಹಲವು ಉಪಯೋಗಗಳು:
1.ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದೆ ರೋಗ ಪ್ರತಿರೋಧಕ 2.ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
3.ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
4.ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
5.ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ 6.ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
7.ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
8.ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.
9.ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
10.ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
11.ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
12.ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
ಹಾಗೆಯೇ ಮೂಲಂಗಿ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚುವುದಲ್ಲದೆ, ಮಲಬದ್ದತೆಯನ್ನು ನಿವಾರಿಸುತ್ತದೆ. ಇದರಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೂ ಮೂಲಂಗಿ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು. ಇನ್ನು ಮೂಲಂಗಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಈ ಬಗ್ಗೆ ಎಚ್ಚರವಿರಲಿ: ಗರ್ಭಿಣಿಯರು ಮೂಲಂಗಿಯನ್ನು ಬೇಯಿಸಿ ತಿನ್ನಬೇಡಿ. ಏಕೆಂದರೆ ಬೇಯಿಸುವುದರಿಂದ ಅದರಲ್ಲಿರುವ ಫೋಲಿಕ್ ಆಮ್ಲ ಆವಿಯಾಗಿ ಹೋಗುತ್ತದೆ. ಆದರಿಂದ ಹಸಿಯಾಗಿ ತಿನ್ನಬೇಕು.
Comments are closed.