ಕರಾವಳಿ

ಪ್ರಧಾನಿ ಮೋದಿಯವರಿಂದಲೇ ಶ್ಲಾಘಿಸಲ್ಪಟ್ಟ ಮಂಗಳೂರಿನ ಈ ಯುವಕನ ಸಾಧನೆಯಾದರೂ ಏನು?(ವೀಡಿಯೋ ವರದಿ)

Pinterest LinkedIn Tumblr

ಮಂಗಳೂರು: ಮಂಗಳೂರಿನ ಈ ಯುವಕನ ಸಾಧನೆಗೆ ಸ್ವತಹ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗಾದರೇ ಈ ಯುವಕ ಮಾಡಿರುವ ಅ ಅಧ್ಬುತ ಸಾಧನೆಯಾದರೂ ಏನು?

ಸೆಪ್ಟಂಬರ್ 17ರಂದು ಅಂದರೆ ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮ ದಿನದ ಸಂಭ್ರಮ.

ಈ ಶುಭ ಸಂದರ್ಭದಲ್ಲಿ ಮೋದಿಯವರಿಗೆ ದೇಶ ವಿದೇಶಗಳಿಂದ ಗಣ್ಯರು ಶುಭಾಶಯ ಕೋರುತ್ತಿದ್ದರೆ, ಇತ್ತ ಮಂಗಳೂರಿನ ಹೊರವಲಯದ ಅಡ್ಯಾರ್ ನಿವಾಸಿ ಕಲಾವಿದ ಶಶಿ ಅಡ್ಕಾರು ಅವರು ಮೋದಿಯವರ ಹುಟ್ಟು ಹಬ್ಬಕ್ಕೆ ವಿಶೇಷ ರೀತಿಯ ಉಡುಗೊರೆ ನೀಡಿದ್ದಾರೆ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಕಲಾವಿದರಾಗಿದ್ದ ಶಶಿ ಅಡ್ಕಾರ್‌ ಅಶ್ವತ್ಥ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಿಡಿಸಿದ್ದರು.

ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್‌ ಅವರ ಅಣ್ಣ ಶಿವರಾಮ ಅವರ ಪುತ್ರರಾಗಿರುವ ಶಶಿ ಅಡ್ಕಾರ್‌ ಅವರಿಗೆ ಮೊದಲಿನಿಂದಲೂ ಕಲೆಯಲ್ಲಿ ಹೊಸತನ್ನು ಸೃಷ್ಟಿಸುವ ಹವ್ಯಾಸ.

ಅದರಂತೆ ಪ್ರಧಾನಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನದ ಅಂಗವಾಗಿ ಶಶಿ ಅಡ್ಕಾರು ಅವರು ಅಶ್ವತ್ಥ ಎಲೆಯಲ್ಲೇ ರೂಪಿಸಿದ್ದ ಮೋದಿಯವರ ಈ ಚಿತ್ರವನ್ನು ಶಶಿ ಅವರ ಸಹೋದರ ಸಂದೇಶ್‌ ಅಡ್ಕಾರ್‌ ಅವರು ಪ್ರಧಾನಿಯವರಿಗೆ ಟ್ವೀಟ್‌ ಮಾಡಿದ್ದರು.

ಈ ಚಿತ್ರವನ್ನು ಸ್ವತಃ ಮೋದಿಯವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು ಶಶಿ ಅಡ್ಕಾರ್ ಅವರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟ್ವೀಟ್‌ ನೋಡಿದ ಪ್ರಧಾನಿಯವರು ರೀಟ್ವೀಟ್‌ ಮೂಲಕ ತಮ್ಮ ಟ್ವೀಟರ್‌ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, ಶಶಿ ಅವರ ಕ್ರಿಯಾಶೀಲತೆಯನ್ನು ಶ್ಲಾಘಿಸಿದ್ದಾರೆ.

Comments are closed.