ಕರ್ನಾಟಕ

ಕೊರೊನಾ ಸೋಂಕಿಗೆ ಬಲಿಯಾದ ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್

Pinterest LinkedIn Tumblr

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಸದಸ್ಯ ಎಂ. ನಾಗರಾಜ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಎರಡು ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ನಾಗರಾಜ್ ಅವರಿಗೆ ಕೋವಿಡ್ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

2001ರಲ್ಲಿ ಕುರುಬರಹಳ್ಳಿ, 2010ರಲ್ಲಿ ನಂದಿನಿ ಲೇಔಟ್ ವಾರ್ಡ್ ಗಳಿಂದ ಪಾಲಿಕೆಗೆ ಆಯ್ಕೆಯಾಗಿದ್ದ ನಾಗರಾಜ್ ಲೆಕ್ಕಪತ್ರ ಸ್ಥಾಯಿ ಸಮಿತಿ, ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನಾಗರಾಜ್ 2015ರಲ್ಲಿ ಸಹ ನಂದಿನಿ ಲೇಔಟ್ ವಾರ್ಡ್ ನಿಂದ ಬಿಬಿಎಂಪಿಗೆ ಸ್ಪರ್ಧಿಸಿದ್ದರು.

Comments are closed.