ಕರಾವಳಿ

ಮಂಗಳೂರಿನಲ್ಲಿ ಪ್ಲೆಕ್ಸ್‌ಗಳ ಹಾವಾಳಿ : ಕೂಡಲೇ ಫ್ಲೆಕ್ಸ್, ಕಟೌಟ್ ತೆರವುಗೊಳಿಸುವಂತೆ ಮೇಯರ್ ಸೂಚನೆ

Pinterest LinkedIn Tumblr

ಮಂಗಳೂರು: ಮಂಗಳೂರಿನ ವಿವಿದೆಡೆಗಳಲ್ಲಿ ಮತ್ತೆ ಪ್ಲೆಕ್ಸ್ ಹಾವಾಳಿ ಆರಂಭವಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ದಿಢೀರ್ ಎಂದು ತಲೆ ಎತ್ತಿರುವ ಪ್ಲೆಕ್ಸ್ ಗಳ ತೆರವು ಕಾರ್ಯಾಚರಣೆಗೆ ಇದೀಗ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾದ ವಿವಿಧ ಖಾಸಗಿ ಮತ್ತು ಸಾವ೯ಜನಿಕ ಸಂಬಂಧಿತ ಕಟೌಟ್ ಯಾ ಫ್ಲೆಕ್ಸ್ ಅನ್ನು ತುತಾ೯ಗಿ ತೆರವುಗೊಳಿಸುವಂತೆ ಸಾವ೯ಜನಿಕರಲ್ಲಿ ವಿನಂತಿಸಲಾಗಿದೆ. ತಪ್ಪಿದಲ್ಲಿ ಮಹಾನಗರಪಾಲಿಕೆಯಿಂದಲೇ ಫ್ಲೆಕ್ಸ್ ತೆರವು ಕಾಯಾ೯ಚರಣೆ ನಡೆಸಲಾಗುವುದು ಹಾಗೂ ಪಾಲಿಕೆಯಿಂದ ವಷಪಡಿಸಲಾದ ಪ್ಲೆಕ್ಸ್(Flex) ಮತ್ತು ಫ್ರೇಮ್ (Frame) ಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ತಿಳಿಸಿದ್ದಾರೆ.

ಇತ್ತೀಚಿಗೆ ಜಿಲ್ಲೆಯಲ್ಲಿ ಕೆಲವು ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆದಿದ್ದು, ಅ ಬಳಿಕ ವಿವಿಧ ಸ್ಥಾನಗಳಿಗೆ ಅಯ್ಕೆಯಾದ ಪದಾಧಿಕಾರಿಗಳಿಗೆ ಶುಭಕೋರಿ ಹಲವಾರು ಮಂದಿ ನಗರದಲ್ಲಿ ಅಲ್ಲಲ್ಲಿ ಪ್ಲೆಕ್ಸ್ ಗಳನ್ನು ಹಾಕಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ ಅನಧೀಕೃತವಾಗಿ ಹಾಕಲಾಗಿರುವ ಪ್ಲೆಕ್ಷ್ ಗಳಿಂದ ನಗರದ ಸೌಂದರ್ಯಕರಣಕ್ಕೆ ದಕ್ಕೆ ಬರುತ್ತಿದೆ. ಮಾತ್ರವಲ್ಲದೇ ಪ್ಲೆಕ್ಷ್ ಗಳನ್ನು ತೆರವುಗೊಳಿಸುವಂತೆ ಸಾವ೯ಜನಿಕರಿಂದ ಅನೇಕ ದೂರುಗಳು ಬರುತ್ತಿರುವುದರಿಂದ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ವೈ ಭರತ್ ಶೆಟ್ಟಿ ಅವರ ಸಹಕಾರದೊಂದಿಗೆ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಕಲಾದ ವಿವಿಧ ಖಾಸಗಿ ಮತ್ತು ಸಾವ೯ಜನಿಕ ಸಂಬಂಧಿತ ಅನಧಿಕೃತ ಕಟೌಟ್ ಅಥವ ಫ್ಲೆಕ್ಸ್ ಗಳನ್ನು ಮುಂದಿನ ಮೂರು ದಿನಗಳೊಳಗಾಗಿ ತೆರವುಗೊಳಿಸುವಂತೆ ಸಾವ೯ಜನಿಕರಿಗೆ ಸೂಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ಬ್ಯಾನರ್ ಅಳವಡಿಕೆಗೆ ಮಂಗಳೂರು ಮಹಾನಗರ ಪಾಲಿಕೆಯ ಅನುಮತಿ ಕಡ್ಡಾಯವಾಗಿದೆ.ಈ ಸೂಚನೆಯನ್ನು ತಪ್ಪಿದಲ್ಲಿ ಮಹಾನಗರಪಾಲಿಕೆಯಿಂದಲೇ ಫ್ಲೆಕ್ಸ್ ತೆರವು ಕಾಯಾ೯ಚರಣೆ ನಡೆಸಲಾಗುವುದು ಹಾಗೂ ಪಾಲಿಕೆಯಿಂದ ವಶಪಡಿಸಲಾದ ಪ್ಲೆಕ್ಸ್(Flex) ಮತ್ತು ಫ್ರೇಮ್ (Frame) ಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಮೇಯರ್ ತಿಳಿಸಿದ್ದಾರೆ.

Comments are closed.