ಆರೋಗ್ಯ

ಆಪಲ್ ಸಿಡರ್ ವಿನೆಗರ್ ಮತ್ತು ಬೇಕಿಂಗ್ ಸೋಡಾ ಸೇವಿಸುವುದರಿಂದ ದೇಹಕ ತೂಕ ಇಳಿಸುವಿಕೆಗೆ ಸಹಕಾರಿ.

Pinterest LinkedIn Tumblr

ಲಾಕ್‌ಡೌನ್‌ನಿಂದಾಗಿ ದಿನನಿತ್ಯದ ವರ್ಕ್ ಔಟ್‌ಗಳನ್ನು ಮಾಡದೆ ಈಗಾಗಲೇ ತಿಂಗಳು ಕಳೆದಿದೆ. ಇದರಿಂದ ಖಂಡಿತ ನಮ್ಮ ದೈಹಿಕ ಆರೋಗ್ಯದ ಮೇಲೆ ಹಲವು ದುಷ್ಪಾರಿಣಾಮ ಉಂಟು ಮಾಡಿದೆ.

ಇದೆಲ್ಲವೂ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಲೂ ಆಗಬಹುದು. ಹಾಗಾಗಿ ನಮ್ಮ ದೇಹದಲ್ಲಿ ಅನಗತ್ಯ ಕೊಬ್ಬಿನಾಂಶದ ಶೇಖರಣೆಯಾಗುತ್ತದೆ. ಹೆಚ್ಚುವರಿ ತೂಕವಾಗುತ್ತದೆ. ಹೊಟ್ಟೆಯ ಭಾಗದ ಕೊಬ್ಬು ಅಧಿಕವಾಗುತ್ತದೆ. ಯಾವುದೇ ರೀತಿಯ ದೈಹಿಕ ಚಟುವಟಿಕೆ ಇಲ್ಲದೆ ಇದ್ದರೆ ಮತ್ತು ಅನಾರೋಗ್ಯಕಾರಿ ಆಹಾರ ಸೇವಿಸಿದರೆ ತೂಕ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ತೂಕ ಇಳಿಸಿಕೊಳ್ಳುವುದಕ್ಕೆ ವರ್ಕ್ ಔಟ್ ನ ಹೊರತಾಗಿಯೂ ನೀವು ಕೆಲವು ಪಾನೀಯಗಳನ್ನು ಸೇವಿಸುವುದರಿಂದಾಗಿ ಸಾಧಿಸಬಹುದು. ಈ ಬಗ್ಗೆ ನಿಮಗೆಷ್ಟು ತಿಳಿದಿದೆ?

ಒಂದು ವೇಳೆ ನಿಮಗೆ ಮನೆಯಲ್ಲಿ ಯಾವುದೇ ಕೆಲಸ ಇಲ್ಲದೆ ಇದ್ದರೆ ಮತ್ತು ತೂಕ ಇಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೆ ಕೊಬ್ಬು ಇಳಿಸುವಿಕೆಗೆ ನೆರವು ನೀಡುವ ಪಾನೀಯದ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ಯಿದ್ದೇವೆ. ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ನೀವು ಈ ಪಾನೀಯವನ್ನು ತಯಾರಿಸಬಹುದು. ಬೇಕಿಂಗ್ ಸೋಡಾ ಮತ್ತು ಆಪಲ್ ಸಿಡರ್ ವಿನೆಗರ್.

ಹಾಗಾದ್ರೆ ಈ ಪಾನೀಯ ತಯಾರಿಸುವುದು ಹೇಗೆ ತಿಳಿಯೋಣ:

ಒಂದು ಗ್ಲಾಸ್ ತೆಗೆದುಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಆಪಲ್ ಸಿಡರ್ ವಿನೆಗರ್ ಮತ್ತು ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ. ಇದೀಗ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಫ್ಯಾಟ್ ಕರಗಿಸುವ ಪಾನೀಯ ಸಿದ್ಧವಾದಂತೆ.

ಆಪಲ್ ಸಿಡರ್ ವಿನೆಗರ್ ಮತ್ತು ಬೇಕಿಂಗ್ ಸೋಡಾ ಸೇವಿಸುವ ಲಾಭಗಳು

ಈ ಡ್ರಿಂಕ್ ನಲ್ಲಿ ಹಲವು ನ್ಯೂಟ್ರಿಯಂಟ್ ಗಳು ಮಿಕ್ಸ್ ಆಗಿರುತ್ತದೆ ಮತ್ತು ಎನ್ಜೈಮ್ ಗಳಿರುತ್ತದೆ. ಇದು ಜೀರ್ಣಕ್ರಿಯೆ ಹೆಚ್ಚಿಸುವುದಕ್ಕೆ ನೆರವು ನೀಡುತ್ತದೆ. ಪ್ರತಿದಿನ ಇದನ್ನು ಸೇವಿಸುವುದರಿಂದಾಗಿ ತೂಕ ಇಳಿಸುವಿಕೆಗೆ ನೆರವು ನೀಡುತ್ತದೆ. ಆಪಲ್ ಸಿಡರ್ ವಿನೆಗರ್ ಆರೋಗ್ಯದ ಟಾನಿಕ್ ಗಳ ತಯಾರಿಕೆಯಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಸೇಬುವನ್ನು ಫರ್ಮೆಂಟೇಷನ್ ಪ್ರಕ್ರಿಯೆಗೆ ಒಳಪಡಿಸಿ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಅಸೆಟಿಕ್ ಆಮ್ಲವಿರುತ್ತದೆ. ಇದು ತೂಕ್ ಇಳಿಸಲು ನೆರವು ನೀಡುತ್ತದೆ ಎಂದು ನಂಬಲಾಗಿದೆ.
ಬೇಕಿಂಗ್ ಸೋಡಾ- ಇದು ಕ್ಯಾಲೋರಿ ಅಧಿಕ ಸೇವನೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹದ್ದುಬಸ್ತಿಯಲ್ಲಿ ಇಡುತ್ತದೆ. ಅಜೀರ್ಣತೆಯ ಸಮಸ್ಯೆಗೂ ಇದು ಸಹಾಯ ಮಾಡುತ್ತದೆ.

Comments are closed.