ಕುಂದಾಪುರ: ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಎರಡು ಲಾರಿಗಳನ್ನು ಅಡ್ಡಗಟ್ಟಿದ ಪೊಲೀಸರು 52 ಕೋಣಗಳನ್ನು ರಕ್ಷಿಸಿದ್ದು ಎರಡು ಲಾರಿ ಸಹಿತ ನಾಲ್ವರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.


ದಾವಣಗೆರೆ ಮೂಲದ ಮೆಹಬೂಬ್ (27), ಬೆಳಗಾಂ ಮೂಲದ ಬಾಪು ಸಾಹೇಬ್ (46), ದಾವಣಗೆರೆ ಚಿಕ್ಕನಹಳ್ಳಿಯ ಇಮ್ರಾನ್ (29), ಬೆಳಗಾಂ ಮೂಲದ ಆಸಿಫ್ (23) ಬಂಧಿತ ಆರೋಪಿಗಳು.
ಘಟನೆ ವಿವರ:
ಒಂದು ಲಾರಿಯಲ್ಲಿ 24 ಕೋಣಗಳು ಮತ್ತೊಂದು ಲಾರಿಯಲ್ಲಿ 28 ಕೋಣಗಳನ್ನು ತುಂಬಿಸಿಕೊಂಡ ಆರೋಪಿಗಳು ಅದನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.