ಅಂತರಾಷ್ಟ್ರೀಯ

ಕೊಹ್ಲಿ ನಂತರ ಟೀಂ ಇಂಡಿಯಾದ ನಾಯಕತ್ವ ಪಟ್ಟ ಯಾರ ಹೆಗಲಿಗೆ : ಇಲ್ಲಿದೆ ಉತ್ತರ!

Pinterest LinkedIn Tumblr

ಕೆ.ಎಲ್. ರಾಹುಲ್

ಬೆಂಗಳೂರು : ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾದ ಉತ್ತರಾಧಿಕಾರಿ ಯಾರಾಗ ಬಹುದು ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿದ್ದ ಆಕಾಶ್ ಚೋಪ್ರಾ ಉತ್ತರ ನೀಡಿದ್ದಾರೆ.

ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗಬಹುದು? ಯಾರಿಗೆ ಅ ಪಟ್ಟ ಒಲಿಯ ಬಹುದು? ಅ ಅದೃಷ್ಟವಂತ ಪಟ್ಟಿಯಲ್ಲಿ ಯಾರ ಹೆಸರು ಮುಂಚೂನಿಯಲ್ಲಿ ಕಾಣಿಸಿಕೊಳ್ಳ ಬಹುದು ಎಂಬ ಪ್ರಶ್ನೆ ಹಲವರನ್ನು ಕಾಡಿರ ಬಹುದು.

ಈ ಎಲ್ಲಾ ಪ್ರಶ್ನೆಗಳಿಗೆ ಆಕಾಶ್ ಚೋಪ್ರಾ ಅವರು ಉತ್ತರ ನೀಡಿದ್ದು, ಕೊಹ್ಲಿ ನಂತರತ್ರ ಈ ಸ್ಥಾನಕ್ಕೇರಲು ಕರ್ನಾಟಕ ಮೂಲದ ಯುವ ಆಟಗಾರನೊಬ್ಬ ಸಿದ್ಧನಾಗ್ತಿದ್ದಾನೆ. ಪಂದ್ಯದಲ್ಲಿ ಅವರ ತಂತ್ರಗಾರಿಕೆಯನ್ನು ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ.

ಆಕಾಶ್ ಚೋಪ್ರಾ

ಅದು ಬೇರೆ ಯಾರೂ ಅಲ್ಲ, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಲಿರುವ ಭಾರತೀಯ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರೇ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿಯಾಗಲು ಸೂಕ್ತ ಎಂದು ಆಕಾಶ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಒಂದೇ ವಯಸ್ಸಿನವರು. ಅವರಿಬ್ಬರ ನಂತರ ತಂಡಕ್ಕೆ ಸೂಕ್ತ ನಾಯಕನ ತಯಾರಿ ಮಾಡಬೇಕಾಗುತ್ತದೆ.ಕ್ರೀಡಾ ಕ್ಷೇತ್ರದಲ್ಲಿ ತಂತ್ರಗಾರಿಕೆ ಅರಿತಿರುವ ಹಾಗೂ ವಿಕೆಟ್ ಕಿಪರ್ ಆಗಿಯೂ ಉತ್ತಮ ಅನುಭವ ಇರುವ ಕೆ.ಎಲ್. ರಾಹುಲ್ ಅವರಿಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿದರೆ ಉತ್ತಮವಾಗಿರುತ್ತದೆ ಎಂದು ಆಕಾಶ್ ನುಡಿದಿದ್ದಾರೆ.

ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತಂಡದ ನಾಯಕರಾಗಿದ್ದ ಆರ್. ಅಶ್ವಿನ್ ಅವರು ಈಗ ದೆಹಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಹಾಗಾಗಿ ಈ ವರ್ಷ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಕೆ.ಎಲ್. ರಾಹುಲ್ ವಹಿಸಿಕೊಂಡಿದ್ದಾರೆ.

 

Comments are closed.