ಪ್ರಮುಖ ವರದಿಗಳು

ಬಾಲಿವುಡ್‌ಗೆ ಕಳಂಕ ತರುವ ಸಂಚು : ನಟ ರವಿಕಿಶನ್ ಹೇಳಿಕೆಗೆ ಸಂಸದೆ ಜಯಾಬಚ್ಚನ್ ತಿರುಗೇಟು

Pinterest LinkedIn Tumblr

ನವದೆಹಲಿ, ಸೆಪ್ಟೆಂಬರ್ 15: ಕೆಲವು ವ್ಯಕ್ತಿಗಳ ಕಾರಣಕ್ಕೆ ಇಡೀ ಚಿತ್ರರಂಗಕ್ಕೆ ಮಸಿ ಬಳಿಯವುದು ಸರಿಯಲ್ಲ, ಸಿನಿಮಾ ರಂಗಕ್ಕೆ ಸೇರಿದವರಾಗಿದ್ದುಕೊಂಡೇ ಕೆಲವು ಜನರು ಹಿಂದಿ ಚಿತ್ರರಂಗಕ್ಕೆ ಕಳಂಕ ತರುವ ಮಾತುಗಳನ್ನು ಆಡುತ್ತಿರುವುದು ನಾಚಿಕೆಯುಂಟುಮಾಡಿದೆ’ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಕಿಡಿಕಾರಿದ್ದಾರೆ.

ಚಿತ್ರರಂಗದಲ್ಲಿ ಮಾದಕ ವಸ್ತು ವ್ಯಸನ ತೀವ್ರವಾಗಿದ್ದು, ಹಿಂದಿ ಚಿತ್ರರಂಗಕ್ಕೆ ಕಳಂಕ ತರುವ ಸಂಚಿನ ಪ್ರಯತ್ನಗಳು ನಡೆಯುತ್ತಿದೆ ಎಂದು ಭೋಜ್‌ಪುರಿ ನಟ ಹಾಗೂ ಸಂಸದ ರವಿ ಕಿಶನ್ ಸೋಮವಾರ ಲೋಕಸಭೆಯಲ್ಲಿ ಆರೋಪಿಸಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಜಯಾ ಬಚ್ಚನ್, ಕೆಲವು ವ್ಯಕ್ತಿಗಳ ಕಾರಣಕ್ಕೆ ಇಡೀ ಚಿತ್ರರಂಗಕ್ಕೆ ಮಸಿ ಬಳಿಯವುದು ಸರಿಯಲ್ಲ ಎಂದಿದ್ದಾರೆ.

ಮಾತ್ರವಲ್ಲದೇ ಹಿಂದಿ ಚಿತ್ರರಂಗಕ್ಕೆ ಕಳಂಕ ತರುವ ಸಂಚಿನ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪದಡಿ ಸಂಸದೆ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಶೂನ್ಯ ಅವಧಿ ನೋಟಿಸ್ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಮಾದಕ ವಸ್ತು ಪ್ರಕರಣಗಳು ವಿವಾದ ತೀವ್ರವಾಗಿರುವ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿರುವುದರ ಬಗ್ಗೆ ಚರ್ಚೆ ನಡೆಸಲು ಹಾಗೂ ‘ಬಾಲಿವುಡ್‌ಗೆ ಕಳಂಕ ತರುವ ಸಂಚು’ ಎಂಬ ವಿಷಯದ ಕುರಿತು ಚರ್ಚೆ ನಡೆಸಲು ಅವರು ರಾಜ್ಯಸಭೆ ಕಲಾಪದ ಎರಡನೆಯ ದಿನವಾದ ಮಂಗಳವಾರ ನೋಟಿಸ್ ನೀಡಿದ್ದಾರೆ.

‘ಮನರಂಜನಾ ಕ್ಷೇತ್ರದಲ್ಲಿರುವ ಜನರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗುತ್ತಿದೆ. ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರೇ ಈಗ ಅದನ್ನು ಕೊಳಚೆ ಎನ್ನುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ. ಅಂತಹ ವ್ಯಕ್ತಿಗಳು ಆ ರೀತಿಯ ಭಾಷೆಯನ್ನು ಬಳಸದಂತೆ ಸರ್ಕಾರ ಸೂಚಿಸುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ’ ಎಂಬುದಾಗಿ ರವಿ ಕಿಶನ್ ಹೇಳಿಕೆಯನ್ನು ಉಲ್ಲೇಖಿಸಿ ಜಯಾ ಬಚ್ಚನ್ ಹೇಳಿದ್ದಾರೆ.

Comments are closed.