ಆರೋಗ್ಯ

ಕಬ್ಬನ್ನು ಕೆಂಡದ ಮೇಲೆ ಇಟ್ಟು ಆರಿದ ನಂತರ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ

Pinterest LinkedIn Tumblr

ಕಬ್ಬು ಸಾಮಾನ್ಯವಾಗಿ ನಮಗೆಲ್ಲರಿಗೂ ಇಷ್ಟ. ರಸಭರಿತ ಕಬ್ಬು ತಂಪು ಗುಣ ಹೊಂದಿದೆ. ಕಬ್ಬಿನ ಜ್ಯೂಸ್ ಕುಡಿಯುವದಕ್ಕಿಂತ, ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ. ತಿನ್ನುವಾಗ ಮುಖದ ಸ್ನಾಯುಗಳಿಗೆ ವ್ಯಾಯಾಮವ ಆಗುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಬಾಯಿಯ ದುರ್ಗಂಧ ದೂರವಾಗುತ್ತದೆ.

ಕಬ್ಬಿನಿಂದ ಬೆಲ್ಲ ಹಾಗೂ ಸಕ್ಕರೆ ತಯಾರಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಕ್ಕರೆ ಗಿಂತ ಬೆಲ್ಲವೇ ಉತ್ತಮ. ಈ ಕಬ್ಬು ಮತ್ತು ಬೆಲ್ಲದಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಅವುಗಳ ಬಗ್ಗೆ ಇಂದು ತಿಳಿಯೋಣ..

*ಜಾಂಡೀಸ್ ರೋಗ ಇರುವವರು ಕಬ್ಬಿನ ರಸದಲ್ಲಿ ಹಸಿ ಶುಂಠಿ ರಸ ಸೇರಿಸಿ ಸೇವಿಸಬೇಕು.

*ಕಬ್ಬನ್ನು ಕೆಂಡದ ಮೇಲೆ ಇಟ್ಟು ಆರಿದ ನಂತರ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ.

*ಮೂಗಿನ ರಕ್ತ ಸ್ರಾವಕ್ಕೆ ಕಬ್ಬಿನ ರಸ ಐದಾರು ಹನಿ ಮೂಗಿನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಡಬೇಕು. ಈ ಸಮಸ್ಯೆ ಕಡಿಮೆಯಾಗುತ್ತದೆ.

* ಕಬ್ಬಿನ ಹಾಲು ಕಾಯಿಸಿ ಆರಿಸಿ ಕುಡಿಯುವುದರಿಂದ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

* ಕಬ್ಬಿನ ಬೇರುಗಳಿಗೆ ಬುಡಚಿ ಎಂದು ಕರೆಯುತ್ತಾರೆ.
ಈ ಬೇರುಗಳ ಚೂರ್ಣ ಅಥವಾ ಕುದಿಸಿದ ನೀರನ್ನು ಸೇವಿಸುವುದರಿಂದ ತಾಯಂದಿರ ಎದೆ ಹಾಲು ಹೆಚ್ಚಿಸುತ್ತದೆ.

*ಬೆಲ್ಲವನ್ನು ನೀರು ಹಾಕದೇ ಕರಗಿಸಿ ಪಾಕ ಮಾಡುವಾಗ ಸಮಪ್ರಮಾಣದಲ್ಲಿ ಹಸಿ ಶುಂಠಿ ರಸ ಸ್ವಲ್ಪ ಅರಿಶಿನ ಪುಡಿ ಹಾಕಿ ಗಟ್ಟಿಯಾದ ನಂತರ ತಟ್ಟೆಯಲ್ಲಿ ಹಾಕಿ . ಇದಕ್ಕೆ ಅಲ್ಲಿ ಪಾಕ ಎನ್ನುತ್ತಾರೆ. ಇದರ ಸೇವನೆಯಿಂದ ಉಸಿರಾಟ ಸಾರಾಗವಾಗುತ್ತದೆ ಕೆಮ್ಮು ನಿವಾರಣೆಯಾಗುತ್ತದೆ.

*ಬೆಲ್ಲ ಹಳೆಯದಾದಷ್ಟೂ ಒಳ್ಳೆಯದು. ಹಳೆಯ ಬೆಲ್ಲದಲ್ಲಿ ಅಳಲೆಕಾಯಿ ಚೂರ್ಣ, ಒಣ ಶುಂಠಿ ಸೇರಿಸಿ ಸೇವಿಸಿದರೆ ವಾತ ಪಿತ್ತ ಕಫ ನಿವಾರಣಿಯಾಗುತ್ತದೆ.

ಹೀಗೆ ಹಲವಾರು ಖಾಯಿಲೆಗಳಿಗೆ ಮನೆಮದ್ದಾಗಿ ಕಬ್ಬು ಮತ್ತು ಬೆಲ್ಲ ಹಿಂದಿನಿಂದಲೂ ಬಳಕೆಯಲ್ಲಿದೆ.

Comments are closed.