ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಜಯಾನಂದ ಖಾರ್ವಿ ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿ_ಕೆ. ಕೇಶವ ಖಾರ್ವಿ,ಖಜಾಂಚಿ- ರತ್ನಾಕರ ಖಾರ್ವಿ ಪುನರಾಯ್ಕೆಯಾಗಿದ್ದು, ಸಮಿತಿಯ ಸದಸ್ಯರಾಗಿ 32 ಜನರನ್ನು ಸಭೆಯು ಸೂಚಿಸಿ ಅನುಮೋದಿಸಲಾಯಿತು.

ದೇವಸ್ಥಾನ ವಾರ್ಷಿಕ ಸಭೆ ದೇವಸ್ಥಾನ ವಠಾರದಲ್ಲಿ ನಡೆದಿದ್ದು, ಪ್ರಕಾಶ್.ಆರ್. ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿ ಪ್ರಧಾನ ಕಾರ್ಯದರ್ಶಿ ಕೆ. ಕೇಶವ ಖಾರ್ವಿ ವಾಚಿಸಿ, ಕೋಶಾಧಿಕಾರಿ ರತ್ನಾಕರ ಖಾರ್ವಿ ಲೆಕ್ಕಪತ್ರ ಮಂಡಿಸಿದರು.
ರಾಜು ನಾಯ್ಕ್ ಪ್ರಾರ್ಥಿಸಿ, ಅಶೋಕ ಖಾರ್ವಿ ಮದ್ದುಗುಡ್ಡೆ ನಿರ್ವಹಿಸಿ, ನಾಮದೇವ ಖಾರ್ವಿ ವಂದಿಸಿದರು.
Comments are closed.