ಕರ್ನಾಟಕ

ಡ್ರಗ್‌ ಪ್ರಕರಣ: ನಟಿ ರಾಗಿಣಿ ಸಹಿತಾ ಐವರು ಆರೋಪಿಗಳು ಜೈಲು ಪಾಲು-ನಟಿ ಸಂಜನಾ ಮತ್ತೆ ಕಸ್ಟಡಿಗೆ

Pinterest LinkedIn Tumblr

ಬೆಂಗಳೂರು,ಸೆಪ್ಟಂಬರ್.14 : ಸ್ಯಾಂಡಲ್ ವುಡ್ ಡ್ರಗ್‌ ದಂಧೆ ಆರೋಪದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿದ್ದ ಮಾದಕ ನಟಿಯರಾದ ರಾಗಿಣಿ ದ್ವಿವೇದಿ ಸಹಿತಾ ಐವರು ಆರೋಪಿಗಳು ನಿರೀಕ್ಷೆಯಂತೆ ಜೈಲು ಪಾಲಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿದ್ದ ಇನ್ನೊರ್ವ ಆರೋಪಿ ಸಂಜನಾ ಗಲ್ರಾನಿ ಅವರನ್ನು ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ 12 ದಿನದ ಹಾಗೂ ಸಂಜನಾ ಅವರ ಒಂದು ವಾರದ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಿದ್ದು, ಹಿಗಾಗಿ ಪ್ರಕರಣಲ್ಲಿ ಬಂಧಿತರಾಗಿದ್ದ ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ 33ನೇ ಎಸಿಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಸಿಸಿಬಿ ಪೊಲೀಸರು ಹಾಜಾರು ಪಡಿಸಿದ್ದರು.

ಕೋರ್ಟ್ ಸಂಜನಾ ಗಲ್ರಾನಿ ಹೊರತು ಪಡಿಸಿ ನಟಿ ರಾಗಿಣಿ ದ್ವಿವೇದಿ ಸಹಿತಾ ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಇವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ.

ಸಿಸಿಬಿಯಿಂದ ಕೊನೆಯ ಹಂತದ ವಿಚಾರಣೆಯನ್ನು ನಡೆಸಿದ ಬಳಿಕ ಇಂದು ಈ ನಟಿಯರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೊತೆಗೆ ಇಬ್ಬರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ನಂತರ ಅವರನ್ನು ಅಲ್ಲಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು.

ಬಳಿಕ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಯವಾದ ಹಿನ್ನೆಲೆಯಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯ ಹಾಗೂ ಇನ್ನಿತರ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಿಸಿಎಚ್ 33ನೇ ಎಸಿಎಂಸಿ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಂಜನಾ ಗಲ್ರಾನಿ ಹೊರತು ಪಡಿಸಿ ಉಳಿದ ಎಲ್ಲಾ ಆರೋಪಿಗಳಿಗೆ ಸೆಪ್ಟಂಬರ್ 28ರವರೆಗೆ 14 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಿ ತೀರ್ಪು ನೀಡಿದರು. ನಟಿ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಮತ್ತೆ ೩ದಿನ ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ತಾರೆಯರ ಪೈಕಿ ಯಾರೂ ಜೈಲು ಸೇರಿರಲಿಲ್ಲ. ಇದೇ ಮೊದಲು ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿದ ಮೊದಲ ಸ್ಯಾಂಡಲ್​ವುಡ್ ಸೆಲಬ್ರಿಟಿ ರಾಗಿಣಿ ದ್ವಿವೇದಿ ಆಗಿದ್ದಾರೆ.

Comments are closed.