ಆರೋಗ್ಯ

ಅನೇಕ ರೋಗಗಳನ್ನು ಗುಣ ಪಡಿಸಬಲ್ಲ ಈ ವಿಚಿತ್ರ ಬಳ್ಳಿಯ ಬಗ್ಗೆ ತಿಳಿದುಕೊಳ್ಳಿ..

Pinterest LinkedIn Tumblr

ಯಾವುದೋ ಒಂದು ಬಳ್ಳಿ ಕೇಶವರ್ಧಕವಾಗಿ ಬಳಕೆ ಆಗ್ತಿದೆ ಅಂದ್ರೆ ಅದನ್ನು ನೀವು ತಿಳಿದುಕೊಳ್ಳಲೇ ಬೇಕು. ಹಾಗಾದರೆ ಆ ಬಳ್ಳಿ ಅಥವಾ ಗಿಡ ಯಾವುದು ಎಂದು ತಿಳಿಯೋಣ ಬನ್ನಿ. ಅಗ್ನಿಬಳ್ಳಿ ಅಥವಾ ಇರುಮಬಳ್ಳಿ ಹುಲ್ಲುಗಾವಲು ಕುರುಚಲುಕಾಡು ಪಾಳುಭೂಮಿ ಹಾಗೂ ಹೊಲ ತೋಟಗಳಲ್ಲಿಯೂ ಸಹ ಕಂಡುಬರುವಂತಹ ಉಷ್ಣವಲಯದ ನಿವಾಸಿಯಾಗಿರುವಂತಹ ಸಸ್ಯ. ಸಪಿಂಡೆಸಿಯೇ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಕಾರ್ಡಿಯೋಸ್ಪರ್ಮಮ ಹೇಲಿಕ್ಯಾಸಮಮ್ ಕನ್ನಡದಲ್ಲಿ ಅಗ್ನಿಬಳ್ಳಿ ಇರುಮಬಳ್ಳಿ ಕಕರಲತ ಕಂಗುಬಳ್ಳಿ ಮಿಂಚಿನಬಳ್ಳಿ ಮುಂತಾದ ಹೆಸರುಗಳಿದ್ದರೆ ಸಂಸ್ಕ್ರತದಲ್ಲಿ ಇಂದ್ರವಲ್ಲಿ ಎಂದು ಆಂಗ್ಲಭಾಷೆಯಲ್ಲಿ ಬಲೂನಪ್ಲ್ಯಾನ್ಟ್ ,ಬಲೂನ್ ವೈನ್ ಲವಿನಪಾಪ್ ,ಆರ್ಕ್ಸಿಡ್ ಆರ್ಪಿನ್ ಮುಂತಾದ ಹೆಸರುಗಳಿವೆ ಅತೀ ವೇಗವಾಗಿ ಬೆಳೆಯುವ ಅಗ್ನಿಬಳ್ಳಿ ಸುಮಾರು 10 ಅಡಿಗಳಷ್ಟು ಉದ್ದವಾಗಿ ಬೆಳೆಯಬಲ್ಲ ಸಸ್ಯವಾಗಿದ್ದು.ಬೇವಿನ ಎಲೆಯ ವಿನ್ಯಾಸವುಳ್ಳ ನೀಳವಾದ ತಿಳಿ ಹಸಿರು ಬಣ್ಣದ ಗರಗಸದಂತಹ ಅಂಚುಗಳುಳ್ಳ 3 ಎಲೆಗಳು ಒಂದೇ ಬುಡದಿಂದ ಕುಡಿಯೊಡೆದಿದ್ದು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ.

ಪ್ರತಿ ಶಾಖೆಯಲ್ಲಿಯೂ ಸಹ ಇಂತಹ 3 ಉಪಶಾಖೆಗಳಿದ್ದು ಒಟ್ಟು 9 ಎಲೆಗಳಿರುತ್ತವೆ ಬಿಳಿಯ ಬಣ್ಣದ ಚಿಕ್ಕ ಚಿಕ್ಕ ದಳಗಳಿಂದ ಕುಡಿದ ಪುಟ್ಟದಾದ ಹೂವುಗಳಿದ್ದು ಉಸಿರು ಬುರುಡೆಯಂತಹ ಉದಿಕೊಂಡ ತ್ರಿಕೋನಾಕಾರದ ಮರುನ್ ಮಿಶ್ರಿತ ಹಸಿರು ಬಣ್ಣದ ಕಾಯಿ ಗಳಿರುತ್ತವೆ ಇದರೊಳಗಿನ ಬೀಜಗಳು ಪಕ್ವವಾಡಬಳಿಕ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಈ ಕಪ್ಪು ಬೀಜಗಳಲ್ಲಿ ಬಿಳಿಯ ಬಣ್ಣದ ಹೃದಯಾ ಕಾರವಿದ್ದು ಈ ಕಾರಣಕ್ಕಾಗಿಯೇ ಇದನ್ನು ಆರ್ಟ್ಸಿದ ಎಂದು ಕರೆಯುತ್ತಾರೆ.

ಆಯುರ್ವೇದ ಸಿದ್ಧ ವೈದ್ಯ ಪದ್ದತಿ ಮತ್ತು ಸಾಂಪ್ರದಾಯಿಕ ಔಷಧಿಯ ಪದ್ಧತಿಗಳಲ್ಲಿ ಈ ಸಸ್ಯದ ಬೇರು ಎಲೆ ಕಾಂಡ ಹಾಗೂ ಬೀಜಗಳನ್ನು ಔಷಧಿಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಅಗ್ನಿಬಳ್ಳಿಯು ಕೀಟ ನಿರೋಧಕ ಗುಣಗಳಿಂದ ಕೂಡಿದ್ದು ಸಂಧಿವಾತ ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಮೂಲವ್ಯಾಧಿ ಕಾಲುಗಳ ಬಿಗಿತ ಚರ್ಮ ರೋಗಗಳು ಕಣ್ಣು ಹಾಗೂ ಕಿವಿಯ ಸಮಸ್ಯೆಗಳಲ್ಲೂ ಸಹ ಬಳಸಲಾಗುತ್ತದೆ ಎಮೆಟಿಕ್ ಹಾಗೂ ಆಂಟಿ ಪೈರೇಟಿಕ್ ಗುಣಗಳಿಂದ ಕೂಡಿರುವ ಇದನ್ನು ಶ್ವಾಶನಾಳದ ಚಿಕಿತ್ಸೆಯಲ್ಲೂ ಸಹ ಬಳಸಲಾಗುತ್ತದೆ. ಮಂಡಿನೋವು ಹಾಗೂ ಇತರೆ ಕೀಲು ನೋವುಗಳಲ್ಲಿ ಇದರ ಎಲೆಗಳನ್ನು ಉಪ್ಪು ಸೇರಿಸಿ ಪ್ಲಾಸ್ಟರನಂತೆ ಬಳಸಲಾಗುತ್ತದೆ.

ಇದರ ಎಲೆಗಳಿಂದ ಸಾಂಪ್ರದಾಯಿಕ ಚಹಾ ತಯಾರಿಸಿಕೊಂಡು ಕುಡಿಯುತ್ತಾರೆ ಹಾಗೂ ಈ ಅಗ್ನಿ ಬಳ್ಳಿಯ ತಾಜಾ ಎಲೆಗಳನ್ನು ತರಕಾರಿಯಂತೆ ಬಳಸಬಹುದಾಗಿದ್ದು, ಅಗ್ನಿಬಳ್ಳಿಯ ಎಲೆಗಳು ಕೇಷವರ್ಧಕವಾಗಿರುವುದರಿಂದ ಬುಡಕಟ್ಟು ಜನಾಂಗದವರು ತಲೆ ಕೂದಲುಗಳನ್ನು ತೊಳೆಯಲು ಈ ಗಿಡದ ಎಲೆಗಳನ್ನು ಬಳಸುತ್ತಾರೆ ಈ ಸಸ್ಯದ ಬೀಜಗಳಿಂದ ತಯಾರಿಸುವ ಎಣ್ಣೆಯು ಮಂಡಿ ಹಾಗೂ ದೇಹದ ಯಾವುದೇ ನೋವುಗಳಿಗೂ ಸಹ ಸಹಕಾರಿಯಾಗಿದ್ದು ತೈಲ್ಯಾನ್ಡ್ ವಿಯೆಟ್ನಾಮ್ ದಕ್ಷಿಣ ಆಫ್ರಿಕಾ ಇಂಡೋನೇಷ್ಯಾ ಚೀನಾ ಮುಂತಾದ ರಾಷ್ಟ್ರಗಳಲ್ಲಿ ಇದರ ಬಳಕೆ ವ್ಯಾಪಕವಾಗಿದ್ದು ಕ್ಯಾನ್ಸರ್ ಚಿಕಿತ್ಸೆಗು ಸಹ ಇದನ್ನು ಬಳಸಲಾಗುತ್ತದೆ.

ಈ ಸಸ್ಯದ ಮತ್ತೊಂದು ಉಪಯೋಗವೆಂದರೆ ಈ ಸಸ್ಯದ ಬಳ್ಳಿಗಳಿಂದ ಬುಟ್ಟಿಗಳನ್ನು ಹೆಣೆಯಬದುದಾಗಿದೆ ಈ ಸಸ್ಯದ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದ್ದಿದ್ದರು ಕೂಡ ಇದರ ಎಲೆಯ ಪಾನೀಯವನ್ನು 10 ರಿಂದ 15 ಎಮ್ ಎಲ್ ಹಾಗೂ ಕಷಾಯವನ್ನು 50 ರಿಂದ 60 ಎಮ್ ಎಲ್ ಗಳಷ್ಟು ಸೇವಿಸಬಹುದಾಗಿದೆ ಗರ್ಭಿಣಿಯರಿಗೆ ಇದನ್ನು ಬಲಸದಿರಲು ಸೂಚಿಸಲಾಗಿದೆ

Comments are closed.