ಮಂಗಳೂರು, ಆಗಸ್ಟ್.10 : ಕನ್ನಡ ತುಳು ಚಲನಚಿತ್ರ ,ರಂಗಭೂಮಿ ನಟ, ಸಾಹಿತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕಾರ್ಕಳ ಶೇಖರ ಭಂಡಾರಿ ಅವರು ಇಂದು ವಿಧಿವಶರಾಗಿದ್ದಾರೆ.
ವಿಜಯಾ ಬ್ಯಾಂಕ್ ಮಾಜಿ ಉದ್ಯೋಗಿಯಾಗಿದ್ದ ಶೇಖರ ಭಂಡಾರಿಯವರು ಖ್ಯಾತ ಪ್ರಾಸ ಸಾಹಿತಿಯಾಗಿದ್ದರು. ಕಾರ್ಕಳ ನಿವಾಸಿಯಾಗಿದ್ದರೂ ಚಲನಚಿತ್ರ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೇ ಹೆಚ್ಚು ಒಡನಾಟ ಹೊಂದಿದ್ದ ಕಾರ್ಕಳ ಶೇಖರ ಭಂಡಾರಿ ಅವರು ಅನಾರೋಗ್ಯದಿಂದ ಸೋಮವಾರ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಏಕಾಂಗಿ, ಕೋಟಿ ಚೆನ್ನಯ್ಯ, ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ತಮಾಶೆಗಾಗಿ, ಐದೊಂದ್ಲ ಐದು, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲಿ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಮುಂತಾದ ಧಾರವಾಹಿಗಳಲ್ಲಿ ಶೇಖರ ಭಂಡಾರಿ ಅವರು ಅಭಿನಯಿಸಿದ್ದರು. ಖ್ಯಾತ ಪ್ರಾಸ ಸಾಹಿತಿಯೂ ಆಗಿದ್ದ ಶೇಖರ ಭಂಡಾರಿ ಅವರು ಹಲವಾರು ಪುಸ್ತಕಗಳನ್ನು ಹಾಗೂ ಕಿರು ಹೊತ್ತಿಗೆಗಳನ್ನು ಬರೆದಿದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆಭಾಜನರಾಗಿದ್ದರು.
ಕಾರ್ಕಳ ಶೇಖರ ಭಂಡಾರಿ ಅವರ ಪತ್ನಿ ವಾರಿಜಾ ಶೇಖರ್ ಹಾಗೂ ಇಬ್ಬರು ಪುತ್ರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ

Comments are closed.