ಕರಾವಳಿ

ಮದುವೆಯಾಗುವ ಯುವಕ ಯುವತಿರರಿಗೊಂದಷ್ಟು ಕಿವಿ ಮಾತುಗಳು….

Pinterest LinkedIn Tumblr

* ಇಷ್ಟವಿಲ್ಲದ ಹುಡುಗಿ / ಹುಡುಗನನ್ನು ಮದುವೆಯಾಗಬೇಡಿ… ಸಾಯುವವರಿಗೂ ಗೋಳು.
* ಎರಡು ಕುಟುಂಬಗಳ ಆರ್ಥಿಕ ಸಾಂಸ್ಕೃತಿಕ ಸ್ಥಾನ ಮಾನ ತೀರ ಭಿನ್ನವಾಗಿದ್ದರೆ ಕಷ್ಟ ಕಷ್ಟ…
* ಮದುವೆಯಾಗುವಾಗ ತೀರ ಜಿದ್ದಿಗೆ ಬಿದ್ದಂತೆ ವರದಕ್ಷಿಣೆ ಕೇಳಬೇಡಿ… ಹುಡುಗಿಯರ ಕಡೆಯವರು ಪ್ರೆಸ್ಟೀಜಿನ ವಿಷಯ ಹೇಳಿ ಸಾಲ ಮಾಡಬೇಡಿ..
* ಗಂಡು ಹೆಣ್ಣಿನ ವ್ಯಕ್ತಿತ್ವ .. ಅಭಿರುಚಿಗಳು ಒಂದಾದರೆ ಬಾಳು ಚಂದ…
* ಗಂಡಸರು ಚಟವನ್ನು ಬಿಡಿ.. ಹೆಂಗಸರು ಹಟವನ್ನು ಬಿಟ್ಟು ಮದುವೆ ಆಗಿ.. ಬಾಳು ನಂದನವನವಾದೀತು…
* ಅತೀ ಅನುಮಾನ ಗಂಡಸಿಗೆ ಬೇಡ. ಅತಿ ಸ್ವಾತಂತ್ರ್ಯ ಹೆಂಗಸಿಗೆ ಬೇಡ..
* ಹುಡುಗನೇ ಆಗಲಿ ಹುಡುಗಿಯೇ ಆಗಲಿ.. ಮದುವೆಯಾದ ಮೇಲೆ ಸತ್ತ ಲವ್ ಲೈಫ್ ಬಗ್ಗೆ ಕೇಳಬೇಡಿ.. ಇಬ್ಬರ ನೆಮ್ಮದಿಯೂ ಹಾಳು.
* ಮೊದಲು ಗಂಡ ಹೆಂಡತಿ ಆಗಿ.. ತದನಂತರ ಸೊಸೆ ಅಳಿಯ ಆಗುವತ್ತ ಚಿತ್ತ ಹರಿಸಿ..
* ಉದ್ಯೋಗ ಕೆಲಸ ದುಡಿಮೆ ಹಣದ ಮೋಹ ಬಿಡಿ… ಬೆಡ್ಡಿನ ಮೇಲೆ ಹಣ ಹಾಕಿ ರೋಮ್ಯಾನ್ಸ್ ಮಾಡಲಾಗದು ಎಂಬ ವಿವೇಕ ಇರಲಿ..
* ಮಗು ಮಕ್ಕಳು ನಿಮ್ಮ ಸ್ವಂತ ವಿಷಯ … ಆ ವಿಷಯವನ್ನು ನಾಲ್ಕು ಗೋಡೆಗಳ ಮಧ್ಯೆಯೇ ಇಡಿ.. ಬೆಡ್ರೂಮಿನ ಗೋಡೆಯವರೆಗೂ ವಿಷಯ ಬಾರದಿರಲಿ…
* ಗಂಡನ ಸಣ್ಣ ಸಂಪಾದನೆಯನ್ನು ಹೆಣ್ಣು ಅಣಕಿಸದಿರಲಿ.. ಸಾಧಾರಣ ಸುಂದರಿಯಾದ ಹೆಂಡತಿಯನ್ನು ಗಂಡ ಬೇರೆ ಹೆಂಗಸರೊಂದಿಗೆ ಹೋಲಿಕೆ ಮಾಡದೇ ಇರಲಿ..

Comments are closed.