ಆರೋಗ್ಯ

ಇಸುಬು, ಕಜ್ಜಿ, ಸೋರಿಯಾಸಿಸ್ ನಿಂದ ಬಳಲುವವರು ಗಣಿಕೆ ಹೂಗಳ ಕಷಾಯ ಉತ್ತಮ ಪರಿಹಾರ.

Pinterest LinkedIn Tumblr

ಕಾಕಿಸೊಪ್ಪು, ಗಣಿಕೆ ಸೊಪ್ಪು, ಕರೀಕಾಚಿಸೊಪ್ಪು,ಕಾಕಿ ಹಣ್ಣು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಇದು ಚಿಕ್ಕದಾಗಿ ಪೊದೆಯಂತೆ ಬೆಳೆಯುವ ಗಿಡ. ಇದರ ಹಣ್ಣು ಚಿಕ್ಕದಾಗಿದ್ದು, ಬೀಜವು ಹಳದಿ ಬಣ್ಣದ್ದಾಗಿರುತ್ತದೆ.

ಔಷಧೀಯ ಗುಣಗಳು:
೧) ಧೀರ್ಘಕಾಲದ ಬಾಯಿ ಹುಣ್ಣಿನಿಂದ ಬಳಲುವವರು ಗಣಿಕೆ ಸೊಪ್ಪಿನ ಪಲ್ಯ ಸೇವಿಸಬೇಕು.
೨) ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ ಕಾಚಿಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.
೩)ಮೂಲವ್ಯಾಧಿಯಲ್ಲಿ ರಕ್ತ ಹೋಗುತ್ತಿದ್ದಾರೆ ಗಣಿಕೆ ಸೊಪ್ಪಿನ ಪಲ್ಯ ಸೇವಿಸಬೇಕು.
೪) ಕುರುಗಳಾಗಿದ್ದರೆ ಗಣಿಕೆ ಸೊಪ್ಪನ್ನು ಬೇಯಿಸಿ ಅರಿಶಿನ ಬೆರೆಸಿ ಲೇಪಿಸುವುದರಿಂದ ಬೇಗನೆ ಪಕ್ವವಾಗಿ ಒಡೆಯುತ್ತದೆ.
೫) ಹಸಿವೆ ಆಗದಿದ್ದವರು ಗಣಿಕೆ ಸೊಪ್ಪಿನ ಪಲ್ಯ ಸೇವಿಸಬೇಕು, ಇದರಿಂದ ಹಸಿವು ಹೆಚ್ಚುವುದಲ್ಲದೆ ಬಾಯಿರುಚಿಯು ಹೆಚ್ಚುತ್ತದೆ.
೬) ಜ್ವರದಿಂದ ಬಳಲುತ್ತಿರುವವರು ಗಣಿಕೆ ಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.
೭) ಕೆಮ್ಮು ಇರುವಾಗ ಗಣಿಕೆ ಸೊಪ್ಪಿನ ರಸ, ಶುಂಠಿ ರಸ ಹಾಗು ಜೇನುತುಪ್ಪ ಸೇರಿಸಿ ಸೇವಿಸಬೇಕು.
೮) ಮಲಬದ್ಧತೆಯಿಂದ ಬಳಲುವವರು ಕಾಕಿಹಣ್ಣನ್ನು ಮತ್ತು ಸೊಪ್ಪನ್ನು ಆಹಾರದಲ್ಲಿ ಬಳಸಬೇಕು.
೯) ಉರಿಮೂತ್ರದ ಸಮಸ್ಯೆ ಇರುವವರು ಗಣಿಕೆ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬೇಕು.
೧೦) ಚರ್ಮರೋಗಗಳಾದ ಇಸುಬು, ಕಜ್ಜಿ, ಸೋರಿಯಾಸಿಸ್ ನಿಂದ ಬಳಲುವವರು ಗಣಿಕೆ ಹೂಗಳ ಕಷಾಯ ಕುಡಿಯಬೇಕು.
೧೧) ಗರ್ಭಿಣಿಯರು ಗಣಿಕೆ ಸೊಪ್ಪಿನ ಪಲ್ಯ ತಯಾರಿಸಿ ಸೇವಿಸುವುದರಿಂದ ಬೆಳಗಿನ ವಾಕರಿಕೆ ನಿಲ್ಲುತ್ತದೆ.
೧೨) ಸರ್ಪಸುತ್ತು ಆಗಿದ್ದಲ್ಲಿ ಗಣಿಕೆ ಸೊಪ್ಪನ್ನು ಅರೆದು ಅರಿಸಿನ ಬೆರೆಸಿ ಹಚ್ಚಿದ್ದಲಿ ನವೆ, ಉರಿ ಕಡಿಮೆಯಾಗುತ್ತದೆ

Comments are closed.