ರಾಷ್ಟ್ರೀಯ

ಅಯೋಧ್ಯೆಯಲ್ಲಿ ಕರ ಸೇವಕರ ಮೇಲೆ ಗುಂಡು ಹಾರಿಸಲು ಅನುಮತಿ ನೀಡದ್ದಕ್ಕೆ ನನಗೆ ಹೆಮ್ಮೆಯಿದೆ: ಮಾಜಿ ಸಿಎಂ ಕಲ್ಯಾಣ್ ಸಿಂಗ್

Pinterest LinkedIn Tumblr

ಲಕ್ನೋ: 1992 ರಲ್ಲಿ ತಾವು ಸಿಎಂ ಆಗಿದ್ದ ವೇಳೆ ಅಯೋಧ್ಯೆಯಲ್ಲಿ ಕರ ಸೇವಕರ ಮೇಲೆ ಗುಂಡು ಹಾರಿಸಲು ಅನುಮತಿ ನೀಡದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ಮಾಜಿ ಸಿಎಂ ಕಲ್ಯಾಣ್ ಸಿಂಗ್ ಹೇಳಿದ್ದಾರೆ.

1992ರಲ್ಲಿ ನಾನು ಸಿಎಂ ಆಗಿದ್ದ ವೇಳೆ ಅಯೋಧ್ಯೆಯಲ್ಲಿ ಸೇರಿದ್ದ ಕರ ಸೇವೆಕರ ಮೇಲೆ ಗುಂಡು ಹಾರಿಸಲು ಆದೇಶ ನೀಡದ ನಿರ್ಧಾರದಿಂದ ನನಗೆ ಹೆಮ್ಮೆಯಿದೆ, ಸಾಕೇತ್ ಕಾಲೇಜು ಬಳಿ ನಾಲ್ಕು ಬೆಟಾಲಿಯನ್ ಕರ ಸೇವಕರು ಗುಂಪು ಗೂಡಿರುವ ಸ್ಥಳದಲ್ಲಿದೆ ಎಂದು ಅಯೋಧ್ಯಾ ಜಿಲ್ಲಾಡಳಿತ ನನಗೆ ಪತ್ರ ಬರೆದಿತ್ತು.

ಅಯೋಧ್ಯೆಯಲ್ಲಿ ಅಂದು ಏರ್ಪಟ್ಟಿದ್ದ ಸನ್ನಿವೇಶದಲ್ಲಿ, ಮೂರು ಲಕ್ಷ ಕರ ಸೇವಕರ ಮೇಲೆ ಫೈರಿಂಗ್ ಮಾಡದಂತೆ ಬೇರೆ ಯಾವುದಾದರೂ ರೀತಿಯಲ್ಲಿ ಅವರನ್ನು ನಿಯಂತ್ರಣಕ್ಕೆ ತರುವಂತೆ ನಾನು ತಿಳಿಸಿದ್ದೆ, ಒಂದು ವೇಳೆ ನಾನು ಫೈರಿಂಗ್ ಗೆ ಆದೇಶಿದ್ದರೆ ಹಲವು ಮಂದಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದರು. ಆ ವೇಳೆ ದೇಶದ ಹಲವು ಕಡೆಯಿಂದ ಜನ ಬರುತ್ತಿದ್ದರು, ಆ ಸಂದರ್ಭದಲ್ಲಿ ದೇಶಾದ್ಯಂತ ನಿರಂತರವಾಗಿ ಹಿಂಸಾಚಾರ ನಡೆಯುತ್ತಿತ್ತು, ಆ ಸಮಯದಲ್ಲಿ ಯಾವುದೇ ಒಬ್ಬ ಕರ ಸೇವಕ ಸಾವನ್ನಪ್ಪದಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ನನಗೆ ರಾಮ ದೇವರ ಬಗ್ಗೆ ಅಪಾರ ನಂಬಿಕೆಯಿದೆ, ಹಾಗಾಗಿ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ 500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ. ಆಗಸ್ಟ್ 5 ರಂದು ನಡೆಯುವ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

Comments are closed.